ಜೂನ್’ವರೆಗೆ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಗಳು ನಡೆಯಲ್ಲ

ನವದೆಹಲಿ, ಮಾರ್ಚ್ 20, 2020 (www.justkannada.in): ಜಾಗತಿಕ ಮಟ್ಟದ ಪುರುಷರ ಹಾಗೂ ವನಿತೆಯರ ಎಲ್ಲ ವೃತ್ತಿಪರ ಟೆನಿಸ್‌ ಕೂಟಗಳನ್ನು ಜೂನ್‌ 7ರ ತನಕ ರದ್ದುಪಡಿಸಲಾಗಿದೆ.

ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಯನ್ನು ಸೆಪ್ಟಂಬರ್‌ ತಿಂಗಳಿಗೆ ಮುಂದೂಡಿದ ಒಂದೇ ದಿನದಲ್ಲಿ ಡಬ್ಲ್ಯುಟಿಎ ಮತ್ತು ಎಟಿಪಿ ಈ ಪ್ರಕಟಣೆ ಹೊರಡಿಸಿದೆ.

ಟೆನಿಸ್‌ ರಾಷ್ಟ್ರಗಳಲ್ಲೇ ಕೊರೊನಾ ಹಾವಳಿ ತೀವ್ರಗೊಂಡಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಈ ಅವಧಿಯಲ್ಲಿ ಸ್ಟ್ರಾಸ್‌ಬರ್ಗ್‌, ಫ್ರಾನ್ಸ್‌, ರಬಾಟ್‌ ಮತ್ತು ಮೊರೊ ಕ್ಕೊದಲ್ಲಿ ಡಬ್ಲ್ಯುಟಿಎ ಟೂರ್ನಿಗಳು; ಮ್ಯೂನಿಚ್‌, ಎಸ್ಟೋರಿಲ್‌, ಪೋರ್ಚು ಗಲ್‌, ಜಿನೇವಾ, ಲಿಯೋನ್‌ ಮೊದಲಾದೆಡೆ ಎಟಿಪಿ ಕೂಟಗಳು ನಡೆಯಬೇಕಿತ್ತು.

ಮುಂದಿನ ಆದೇಶದ ವರೆಗೆ ಟೆನಿಸಿಗರ ವಿಶ್ವ ರ್‍ಯಾಂಕಿಂಗ್‌ ಅನ್ನು ತಡೆಹಿಡಿಯಲಾಗುವುದು ಎಂದು ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌ ತಿಳಿಸಿದೆ.