ಮೇಲ್ಮನವಿ ಸಲ್ಲಿಸುವವರೆಗೂ ಮಧ್ಯಂತರ ರಕ್ಷಣೆ ನೀಡಿ- ಹೈಕೋರ್ಟ್ ಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪರ ವಕೀಲರಿಂದ ಮನವಿ…

ಬೆಂಗಳೂರು,ಆ,30,2019(www.justkannada.in):  ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿರುವ ಹಿನ್ನೆಲೆ, ಮೇಲ್ಮನವಿ ಸಲ್ಲಿಸುವವರೆಗೆ ಮಧ್ಯಂತರ ರಕ್ಷಣೆ ನೀಡಿ ಎಂದು ಹೈಕೋರ್ಟ್ ಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪರ ವಕೀಲರು ಮನವಿ ಮಾಡಿದ್ದಾರೆ.

ಇಡಿ ಸಮನ್ಸ್ ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿರುವ ಹಿನ್ನೆಲೆ ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಹೀಗಾಗಿ ಮೇಲ್ಮನವಿ ಸಲ್ಲಿಸುವವರೆ ಇಡಿ ಬಂಧಿಸದಂತೆ ಸೂಚಿಸುವಂತೆ ಡಿ.ಕೆ ಶಿವಕುಮಾರ್ ಪರ ವಕೀಲರಾದ ಬಿ.ವಿ ಆಚಾರ್ಯ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

ನಿನ್ನೆ ರಾತ್ರಿ 10 ಗಂಟೆಗತೆ ಇಡಿ ಸಮನ್ಸ್ ನೀಡಿದೆ. ಹೀಗಾಗಿ ಮೇಲ್ಮನವಿ ಸಲ್ಲಿಸಲು ನಮಗೆ ಕಾಲಾವಕಾಶ ಬೇಕು. ಅದ್ದರಿಂದ ಅಲ್ಲಿಯವರೆಗೂ ಮಧ್ಯಂತರ ರಕ್ಷಣೆ ಮುಂದುವರೆಸಿ ಎಂದು ಬಿ.ವಿ ಆಚಾರ್ಯ ಮನವಿ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಪರ ವಕೀಲರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿರುವ ಇಡಿ ಪರ ವಕೀಲರು ತೀರ್ಪು ನೀಡಿದ ನಂತರ ಮಧ್ಯಂತರ ಆದೇಶ ಬೇಡ. ಅರ್ಜಿ ತಿರಸ್ಕರಿಸುವಂತೆ ಎಂದು ವಾದ ಮಂಡಿಸಿದ್ದಾರೆ.

Key words: interim protection -until –appeal-  DK Shivakumar -High Court-ED