ಹೊಸ ಶಿಕ್ಷಣ ನೀತಿ ಮೂಲಕ ಅತಿಥಿ ಶಿಕ್ಷಕರಿಗೆ ಸೇವಾ ವಿಲೀನತೆ ಮಾಡಿ- ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಒತ್ತಾಯ.

ಮೈಸೂರು,ಜನವರಿ,18,2022(www.justkannada.in): ಹೊಸ ಶಿಕ್ಷಣ ನೀತಿ ಮೂಲಕ ಅತಿಥಿ ಶಿಕ್ಷಕರಿಗೆ ಸೇವಾ ವಿಲೀನತೆ ಮಾಡಿ ಎಂದು ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಒತ್ತಾಯ ಮಾಡಿದ್ದಾರೆ.

ಮೈಸೂರಿನಲ್ಲಿ ಅತಿಥಿ ಉಪನ್ಯಾಸಕರ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ  ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಬೇರೆ ಅವರ ಅನ್ನ ಕಿತ್ತು ಇನ್ನೊಬ್ಬರಿಗೆ ನೀಡಬೇಡಿ. ವಾಸ್ತವವಾಗಿ ನಿಮಗೆ ಜನ್ಮ ಕೊಟ್ಟವರು ಶಿಕ್ಷಕರು. ಹಠಕ್ಕೆ ಬೀಳಬೇಡಿ ಸಚಿವರೇ, ಸಿಎಂ ಅವರೇ ಇತ್ತ ನೋಡಿ. 14 ಸಾವಿರ ಶಿಕ್ಷಕರಿಗೂ ನೀವೂ ಮೋಸ ಮಾಡಿದ್ದೀರಾ? ಈ ಬಗ್ಗೆ ನಾವು ಹೋರಾಟ ನಿರಂತರವಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಸರ್ಕಾರದ ಈ ನಿರ್ಧಾರಕ್ಕೆ ನಾವು ಒಪ್ಪಲ್ಲ. ಜೆಓಸಿ ಅವರಿಗು ಸೇವಾ ವಿಲಿನತೆ ಮಾಡಿದ್ರಿ. ಅದೇ ಆಧಾರದಲ್ಲಿ ನಮ್ಮ ಅತಿಥಿ ಶಿಕ್ಷಕರಿಗೂ  ಮಾಡಿ.ಇದು ಮೂಗಿಗೆ ತುಪ್ಪ ಸವರುವಂತ ಆದೇಶವನ್ನ ಸರ್ಕಾರ ಮಾಡಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಮಾತನಾಡಿದ ಅತಿಥಿ ಉಪನ್ಯಾಸಕಿ ಶ್ರೀಜಾ ಅವರು,   ಮಾನಸಿಕವಾಗಿ ನೀವು ನಮ್ಮನ್ನ ಕೊಲ್ಲುತ್ತಿದ್ದೀರಾ.? ಸಂಸಾರ ನಡೆಸಲು ಆಗ್ತಿಲ್ಲ, ಎಲ್ಲರು ಹುಚ್ಚರಂತೆ ಆಗುತ್ತಿದ್ದಾರೆ. ನಿಮ್ಮ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದೇವು, ನಮ್ಮ ಬೆನ್ನಿಗೆ ಚಾಕು ಹಾಕುವಂತ ಕೆಲಸ ಮಾಡಿದ್ದೀರಾ.? ನಮಗೆ ಸ್ವಲ್ಪ ಸ್ವಲ್ಪವೇ ವಿಷ ಕೊಡುವ ಬದಲು, ಒಟ್ಟಿಗೆ ವಿಷ ಕೊಡಿ. ಹೊಡೆದು ಆಳುವ ನೀತಿ ಇಲ್ಲಿಗೆ ನಿಲ್ಲಿಸಿ. ನಿಮ್ಮ ಮುಂದೆಯೇ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಸಾಕಷ್ಟು ಶಿಕ್ಷಕರು ಮುಂದಾಗಿದ್ದಾರೆ. ನಾವು ಸಾಕಷ್ಟು ನೊಂದು ಬೆಂದು ಆತ್ಮಹತ್ಯೆಗೆ ನಿರ್ಧರಿಸಿದ್ದೇವೆ. ನಾವು ಆತ್ಮಹತ್ಯೆ ಮಾಡಿಕೊಂಡರೆ ನಿಮ್ಮ ಹೆಸರನ್ನೇ ಬರೆದು ಸಾಯುತ್ತೇವೆ. ಯಾವುದೇ ಕಾರಣಕ್ಕು ಇದನ್ನ ಇಲ್ಲಿಗೆ ಬಿಡೋದಿಲ್ಲ. ನಮ್ಮ ಹೋರಾಟ ನಿರಂತವಾಗಿ ನಡೆಯುತ್ತೆ ಎಂದು ಹೇಳಿದರು.

Key words: Integrate- guest teachers –service-MLC – KT Shrikanthegowda

ENGLISH SUMMARY…

Merge the services of guest lecturers under the new NEP: MLC K.T. Srikantegowda demands
Mysuru, January 18, 2022 (www.justkannada.in): Member of the Legislative Council K.T. Srikantegowda today, demanded the government to merge the services of guest lecturers under the new National Education Policy.
Speaking at a press meet held in Mysuru today, he said, “he demanded to merge the services of the guest lecturers like the JOC candidates.
Speaking on the occasion guest lecturer Sreeja expressed her view that the guest lecturers are in deep trouble and are unable to lead a decent life. “We all are already depressed and have decided to commit suicide. Our struggle for our demands will continue,” she added.
Keywords: MLC K.T. Srikantegowda/ guest lecturers/ merge services/ demand