ಕೇರಳ ವಿದ್ಯಾರ್ಥಿನಿಯರಿಂದ ಹೊಸ ಆವಿಷ್ಕಾರ ‘ ಟ್ಯಾಬ್ಲೆಟ್ ‘ ಫಿಲ್ಟರ್ ಕಾಫಿ !

ಕೇರಳ ಆಗಸ್ಟ್, ೧೪, ೨೦೨೧: (www.justkannada.in news ) ಕೇರಳದ ಎರ್ನಾಕುಲಂನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ೧೨ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಪ್ರಯಾಣಿಸುತ್ತಿರುವಾಗ ಫಿಲ್ಟರ್ ಕಾಫಿಯನ್ನು ತಯಾರಿಸುವ ವಿಶೇಷ ಗುಳಿಗೆ ಒಂದನ್ನು ಆವಿಷ್ಕರಿಸಿದ್ದಾರೆ!

jk

ಹೌದು. ಈ ಪ್ರಯಾಣಸ್ನೇಹಿ ಸಾವಯವ ಕಾಫಿ ಗುಳಿಗೆಯನ್ನು (ಕ್ಯಾಪ್ಸೂಲ್) ‘ಕಾಫಿ ಫಿಲೆ’ ಎಂದು ಹೆಸರಿಸಿದ್ದಾರೆ. ಮರಗೆಣಸಿನ ಲೇಪನವಿರುವ ಪ್ರತಿಯೊಂದು ಗುಳಿಗೆಯೊಳಗೆ ಫಿಲ್ಟರ್ ಕಾಫಿಯನ್ನು ಸಂಕುಚಿತಗೊಳಿಸಿ ತುಂಬಲಾಗಿದೆ. ಈ ಹೊದಿಕೆ ಗುಳಿಗೆಯೊಳಗಿರುವ ಕಾಫಿ ಕೆಡೆದಿರುವಂತೆ ರಕ್ಷಿಸುತ್ತದೆ ಹಾಗೂ ಸುಲಭವಾಗಿ ಶೇಖರಿಸಿಡಲು ನಿರ್ದಿಷ್ಟವಾದ ಆಕಾರವನ್ನು ಒದಗಿಸಿದೆ. ಈ ಗುಳಿಗೆಗಳನ್ನು ಶೇಖರಿಸಿಡುವುದು ಹಾಗೂ ಬಳಸುವುದು ಬಹಳ ಸುಲಭ.

 

ನೀವು ಮಾಡಬೇಕಾಗಿರುವುದಿಷ್ಟೆ.

ಗುಳಿಗೆಯನ್ನು ಒಂದು ಲೋಟ ಹಾಲು ಅಥವಾ ನೀರಿನಲ್ಲಿ ಹಾಕಿದರಾಯ್ತು. ಕೆಲವೇ ಸೆಕೆಂಡುಗಳಲ್ಲಿ ಆ ಗುಳಿಗೆ ಕರಗಿಹೋಗುತ್ತದೆ. ಈ ಗುಳಿಗೆಯನ್ನು ಸುಲಭವಾಗಿ ನಿಮ್ಮ ಪರ್ಸ್ನೊಳಗೆ ಇಟ್ಟುಕೊಳ್ಳಬಹುದಾಗಿದ್ದು, ಮೂರು ತಿಂಗಳ ಕಾಲ ತಾಜಾ ಆಗಿರುತ್ತದೆ. ಅದ್ಭುತ ಅಲ್ಲವೇ?!
ಈ ಆವಿಷ್ಕಾರದಲ್ಲಿ ಯಶಸ್ವಿಯಾಗಿರುವ ವಿದ್ಯಾರ್ಥಿನಿಯರಾದ ಸೌಂದರ್ಯ ಲಕ್ಷ್ಮೀ , ಎಲಿಶಾ ಏನೊರಿ ಕಡುತೋಸ್, ಡಿಂಪಲ್ ಹಾಗೂ ಶಿವನಂದನಾ ಅವರಿಗೆ ಅಭಿನಂದನೆಗಳು.

ಚಿತ್ರ ಮಾಹಿತಿ ಕೃಪೆ : ಇಂಟರ್ ನೆಟ್

Keywords: Innovation/ Invention/ Filter Coffee/ in capsule/ Kerala/ Enrakulam

ENGLISH SUMMARY :

capsule packed with ‘ filter-coffee ‘ :

Class XII students of Government Girls’ Higher Secondary School, Ernakulam have developed a capsule which can be used to make filter coffee on-the-go.
The travel-friendly organic coffee capsule is called Kaapiphile. Each pill is made compressing the filter coffee into a capsule with cassava covering. which protect the coffee from moisture. It is easy to store and consume.
All that’s left is to drop the capsule into a glass of milk or water. Dissolving within seconds, it is ready to drink.