ಇಂಡಿಯಾ ಓಪನ್ ಬಾಕ್ಸಿಂಗ್: ಮೇರಿಕೋಮ್, ಸರಿತಾದೇವಿ ಚಾಂಪಿಯನ್

ನವದೆಹಲಿ, ಮೇ 25, 2019 (www.justkannada.in): ಮೇರಿಕೋಮ್ ಹಾಗೂ ಎಲ್. ಸರಿತಾದೇವಿ 2ನೇ ಆವೃತ್ತಿಯ ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಏಷ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಾಂಘಾಲ್ 52 ಕೆಜಿ ವಿಭಾಗದಲ್ಲಿ ದೈತ್ಯ ಸಂಹಾರಿ ಖ್ಯಾತಿಯ ಸಚಿನ್ ಸಿವಾಚ್ ಸವಾಲನ್ನು ಮೆಟ್ಟಿ ನಿಂತು 4-1 ಅಂತರದಿಂದ ಜಯ ಸಾಧಿಸಿ ಚಿನ್ನ ಜಯಿಸಿದರು.

ಭಾರತ ಪುರುಷರ 4 ವಿಭಾಗಗಳಾದ 52ಕೆಜಿ, 81ಕೆಜಿ, 91ಕೆಜಿ ಹಾಗೂ +91ಕೆಜಿ ವಿಭಾಗಗಳಲ್ಲಿ ಪದಕ ಜಯಿಸಿದೆ. ಮಹಿಳೆಯರು 51ಕೆಜಿ, 57 ಕೆಜಿ ಹಾಗೂ 75 ಕೆಜಿ ವಿಭಾಗಗಳಲ್ಲಿ ಚಿನ್ನ ಜಯಿಸಿದರು. ಭಾರತ ಟೂರ್ನಿಯಲ್ಲಿ 18ರಲ್ಲಿ 12 ಚಿನ್ನದ ಪದಕಗಳನ್ನು ಬಾಚಿಕೊಂಡಿತು. ಕಳೆದ ವರ್ಷ ಮೊದಲ ಆವೃತ್ತಿಯ ಟೂರ್ನಿಯಲ್ಲಿ ಭಾರತ 6 ಚಿನ್ನದ ಪದಕ ಜಯಿಸಿತ್ತು.