ಪ್ರಸ್ತುತ ಭಾರತವು ಪ್ರಮುಖವಾಗಿ ಐದು ಸವಾಲುಗಳನ್ನು ಎದುರಿಸುತ್ತಿದೆ : ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ

ಮೈಸೂರು,ನವೆಂಬರ್,12,2020(www.justkannada.in) : ಪ್ರಸ್ತುತ  ಭಾರತದ ಆರ್ಥಿಕತೆಯು ಪ್ರಮುಖವಾಗಿ ಐದು ಸವಾಲುಗಳನ್ನು ಎದುರಿಸುತ್ತಿದೆ. ಬೇಡಿಕೆ, ನಿರುದ್ಯೋಗ, ಹಣಕಾಸಿನ ಕೊರತೆ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳಾಗಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.kannada-journalist-media-fourth-estate-under-loss

ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗ ಯೋಜನಾ ವೇದಿಕೆ ವತಿಯಿಂದ ಆಯೋಜಿಸಿದ್ದ ‘’ಪ್ರಸ್ತುತ ಸಮಸ್ಯೆಗಳು ಮತ್ತು ಆರ್ಥಿಕ ಅಭಿವೃದ್ಧಿ’’ಯ ಕುರಿತು ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ವೆಬಿನಾರ್ ನಲ್ಲಿ ಚರ್ಚೆಗೆ ಉತ್ತಮ ವಿಷಯವನ್ನು ಆಯ್ಕೆಮಾಡಲಾಗಿದೆ. ಭಾರತದ ಆರ್ಥಿಕತೆಯು ಪ್ರಕ್ಷುಬ್ಧ ಸ್ಥಿತಿಯತ್ತ ಸಾಗುತ್ತಿದೆ. ಪ್ರಮುಖ ಸೂಚ್ಯಂಕಗಳು ಆರ್ಥಿಕತೆಯ ದೀರ್ಘಕಾಲದ ನಿಧಾನಗತಿಯ ಬಗ್ಗೆ ಸುಳಿವು ನೀಡುತ್ತಿವೆ. ಕರೋನಾ ವೈರಸ್ ಸಾಂಕ್ರಾಮಿಕವು ದೇಶದ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳನ್ನು ದುರ್ಬಲಗೊಳಿಸಿದ್ದು, ಈ ವರ್ಷ ಚೇತರಿಕೆಯು ಅಸಂಭವ ಎನಿಸುತ್ತಿದೆ ಎಂದು ಹೇಳಿದರು.

ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸುವಂತ್ತಾಗಿದೆ. ತೀವ್ರವಾಗಿ ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳು ಚೇತರಿಕೆಯ ಪ್ರಕರಣವನ್ನು ಇನ್ನಷ್ಟು ಹದಗೆಡಿಸುತ್ತವೆ. ಭಾರತದ ಜಿಡಿಪಿ ಬೆಳವಣಿಗೆಯು ಇಡೀ ವರ್ಷ  ನಕಾರಾತ್ಮಕ ವಲಯದಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದರು.

ವಾರ್ಷಿಕ ಜಿಡಿಪಿ ಶೇಕಡಾ 5.10 ಕ್ಕಿಂತಲೂ ಹೆಚ್ಚು ಕುಸಿಯುವ ಮುನ್ಸೂಚನೆ ಇದೆ. ಇದು ನಾಲ್ಕು ದಶಕಗಳಲ್ಲಿ ಜಿಡಿಪಿ ಬೆಳವಣಿಗೆಯ ಅತ್ಯಂತ ದುರ್ಬಲ ದರವನ್ನು ಸೂಚಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಷ್ಟ್ರೀಯ ಜಿಡಿಪಿ ಶೇಕಡಾ 16.50 ರಷ್ಟು ಕುಗ್ಗಬಹುದು ಎಂದು ಇತ್ತೀಚಿನ ಎಸ್‌ಬಿಐ ಎಕೊ-ರ್ಯಾಪ್ ವರದಿ ತಿಳಿಸಿದೆ. ಭಾರತದ ಆರ್ಥಿಕ ಚೇತರಿಕೆಯು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

 India-currently-faces-five-major-challenges-Retired-Chancellor-Pro.K.s.Rangappa

ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿ ಕುಲಪತಿ ಪ್ರೊ.ಎನ್.ಆರ್.ಭಾನುಮೂರ್ತಿ ಅವರು ‘’ಕೋವಿಡ್-19 ಮತ್ತು ಭಾರತದಲ್ಲಿ ಸ್ಥೂಲ ಆರ್ಥಿಕ ನೀತಿ ಪ್ರತಿಕ್ರಿಯೆಗಳು’’ ಕುರಿತು ಮಾತನಾಡಿದರು..

ಬೆಂಗಳೂರಿನಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ.ಆರ್.ಎಸ್.ದೇಶಪಾಂಡೆ ಅವರು ‘’ಹೊಸ ಕೃಷಿ ಕಾಯ್ದೆಯ ಹುಟ್ಟು ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ವಿಷಯ ಕುರಿತು ಕುರಿತು ಮಾತನಾಡಿದರು.

 India-currently-faces-five-major-challenges-Retired-Chancellor-Pro.K.s.Rangappa

ವೆಬಿನಾರ್ ನಲ್ಲಿ ಪ್ರೊ.ಡಿ.ವಿ.ಗೋಪಾಲಪ್ಪ, ಡಾ.ಎಂ.ವಿ.ದಿನೇಶ್, ಡಾ.ನವೀತಾ ತಿಮ್ಮಯ್ಯ, ಪ್ರೊ.ಇಂದುಮತಿ ಇತರರು ಭಾಗವಹಿಸಿದ್ದರು.

key words : India-currently-faces-five-major-challenges-
Retired-Chancellor-Pro.K.s.Rangappa