ಇಂದು ಭಾರತ- ಕಿವೀಸ್ ಸೆಮಿ ಫೈನಲ್ ಪಂದ್ಯ:  ಟೀಂ ಇಂಡಿಯಾಗೆ ಶುಭಕೋರಿದ ಮೈಸೂರಿನ ಕ್ರೀಡಾಭಿಮಾನಿಗಳು…

Promotion

ಮೈಸೂರು,ಜು,9,2019(www.justkannada.in): ವಿಶ್ವಕಪ್ ಕ್ರಿಕೆಟ್  ಅಂತಿಮ ಘಟ್ಟಕ್ಕೆ ತಲುಪ್ಪಿದ್ದು ಇಂದು ಮೊದಲ ಸೆಮಿಫೈನಲ್  ನಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಸೆಣೆಸಾಡಲಿದ್ದು, ಟೀಂ ಇಂಡಿಯಾಗೆ ಮೈಸೂರಿನ ಕ್ರೀಡಾಭಿಮಾನಿಗಳು ಶುಭಕೋರಿದ್ದಾರೆ.

ಇಂಗ್ಲೇಂಡ್ ನ ಮ್ಯಾಂಚೆಸ್ಟರ್ ನಲ್ಲಿ ಸೆಮಿ ಫೈನಲ್ ನಲ್ಲಿ ಕೊಹ್ಲಿ ಪಡೆ ಮತ್ತು ಕೀವಿಸ್ ಎದುರಾಗಲಿದ್ದು ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ. ಇನ್ನು ಸೆಮಿಫೈನಲ್ ಆಡುತ್ತಿರುವ ಹಿನ್ನೆಲೆ ಮೈಸೂರಿನಲ್ಲಿ ಕ್ರೀಡಾ ಪ್ರೇಮಿಗಳು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿ ಟೀಂ ಇಂಡಿಯಾಗೆ ಶುಭಕೋರಿದ್ದಾರೆ.

ಸನ್ನಿ ಕ್ರಿಕೆಟ್ ತಂಡ ಟೀಂ ಇಂಡಿಯಾಗೆ ಶುಭಾಶಯ  ತಿಳಿಸಿದ್ದು, ಮೈಸೂರಿನ ಬನ್ನಿಮಂಟಪದ ಕ್ರೀಡಾಂಗಣದಲ್ಲಿ  ಕ್ರೀಡಾಭಿಮಾನಿಗಳು ಜಿತೆಗಾ ಬಿ ಜಿತೆಗಾ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಸನ್ನಿ ಕ್ರಿಕೆಟರ್ಸ್ ತಂಡದ  ಟಿಬೆಟ್ ರಾಜು, ಯಶ್ವಂತ್, ಚಂದ್ರಶೇಖರ್, ರಮೇಶ್, ಟಿಬೆಟ್ ರಾಜು, ಮಂಜುನಾಥ್, ಮಗಿಪಾಲ್ ಹಾಗೂ ಮಧು ಇದೇವೇಳೆ ಉಪಸ್ಥಿತರಿದ್ದರು.

ಇಂದು ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಆಡಲಿರುವ ಸಂಭಾವ್ಯ ತಂಡ ಇಲ್ಲಿದೆ ನೋಡಿ…

ಭಾರತ ಸಂಭಾವ್ಯ ತಂಡ…

ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ (ಸಿ), ರಿಷಭ್ ಪಂತ್, ಎಂ.ಎಸ್. ಧೋನಿ (ವಿಕೆ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ/ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್/ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್.

 ನ್ಯೂಜಿಲೆಂಡ್ ಸಂಭಾವ್ಯ ತಂಡ..

ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್/ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲಾಥಮ್ (ವಿಕೆ), ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

Key words: India vs newziland-semi-final -Mysore – fans –wish-Team India …