‘ಇಂಡಿಯಾ ಟುಡೆ’ ಭಾರತದ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ‘ಸ್ಕೂಲ್ ಆಫ್ ಪ್ಲಾನ್ನಿಂಗ್ ಅಂಡ್ ಆರ್ಕಿಟೆಕ್ಚರ್’ಗೆ ೭ನೇ ಸ್ಥಾನ

 

ಮೈಸೂರು, ಜೂನ ೨೯, ೨೦೨೧ (www.justkannada.in): ಭಾರತದ ಪ್ರತಿಷ್ಠಿತ ಮಾದ್ಯಮ ಸಂಸ್ಥೆಗಳ ಪೈಕಿ ಗುರುತಿಸಿಕೊಂಡಿರುವ ‘ಇಂಡಿಯಾ ಟುಡೆ’ ಪ್ರತಿ ವರ್ಷ ಭಾರತದಾದ್ಯಂತ ೧೪ ವಿವಿಧ ಶೈಕ್ಷಣಿಕ ವಿಷಯಗಳಲ್ಲಿ ‘ಭಾರತದ ಅತ್ಯುತ್ತಮ ಕಾಲೇಜು ಸಮೀಕ್ಷೆ’ಯನ್ನು ಕೈಗೊಳ್ಳುತ್ತದೆ. ಇಂಡಿಯಾ ಟುಡೆ ನಡೆಸಿದ ೨೫ನೇ ವರ್ಷದ ಸಮೀಕ್ಷೆಯಲ್ಲಿ, ಆರ್ಕಿಟೆಕ್ಚರ್ (ವಾಸ್ತು ಶಾಸ್ತ್ರ ) ವಿಭಾಗದಲ್ಲಿ ಮೈಸೂರು ವಿಶ್ವವಿದ್ಯಾಲಯದ ‘ಸ್ಕೂಲ್ ಆಫ್ ಪ್ಲಾನ್ನಿಂಗ್ ಅಂಡ್ ಆರ್ಕಿಟೆಕ್ಚರ್’ ೭ನೇ ಸ್ಥಾನವನ್ನು ಪಡೆದುಕೊಂಡಿದೆ.

ಕಳೆದ ಒಂದು ವರ್ಷದಿಂದ ಕೋವಿಡ್ ಸಾಂಕ್ರಾಮಿಕ ಇಡೀ ಪ್ರಪಂಚವನ್ನೇ ಕಾಡುತ್ತಿದ್ದು, ಭಾರತದಲ್ಲಿ ಶೈಕ್ಷಣಿಕ ಸಂಸ್ಥೆಗಳು ಈ ಸಾಂಕ್ರಾಮಿಕದಿಂದ ಎದುರಾದ ಸವಾಲುಗಳನ್ನು ಮೆಟ್ಟಿ ನಿಂತು ಯಾವ ರೀತಿ ಡಿಜಿಟಲ್ ಶಿಕ್ಷಣವನ್ನು ಅಳವಡಿಸಿಕೊಂಡು ತನ್ನ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಜೊತೆಗೆ ವಿದ್ಯಾರ್ಥಿಗಳನ್ನು ಹೇಗೆ ಪರಿಣಾಮಕಾರಿಯಾಗಿ ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದುಕೊಳ್ಳುವುದು ಈ ಸಮೀಕ್ಷೆಯ ಮುಖ್ಯ ಉದ್ದೇಶವಾಗಿತ್ತು.

jk

ಮೈಸೂರು ವಿಶ್ವವಿದ್ಯಾಲಯದ ಆರ್ಕಿಟೆಕ್ಚರ್ ಹಾಗೂ ಪ್ಲಾನ್ನಿಂಗ್ ಕೋವಿಡ್ ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಆನ್‌ಲೈನ್ ಪದ್ಧತಿಯ ಮೂಲಕ ತನ್ನ ಶಿಕ್ಷಣ ಹಾಗೂ ಸಂಶೋಧನಾ ಕಾರ್ಯಕ್ರಮಗಳನ್ನು ಬಹಳ ಯಶಸ್ವಿ ಹಾಗೂ ಪರಿಣಾಮಕಾರಿಯಾಗಿ ಮುಂದುವರೆಸುಕೊಂಡು ಬಂದಿದೆ. ಬಲಿಷ್ಠ ಸಾಂಸ್ಥಿಕ ಬೆಂಬಲ, ಅತ್ಯುತ್ಕೃಷ್ಟವಾದ ಪ್ರೋತ್ಸಾಹವುಳ್ಳ ಬೋಧಕ ಸಿಬ್ಬಂದಿ ಹಾಗೂ ಬದ್ಧತೆಯುಳ್ಳ ವಿದ್ಯಾರ್ಥಿಗಳೊಂದಿಗೆ ಇಡೀ ಪರಿಸರ ವ್ಯವಸ್ಥೆಯೇ ವರ್ಚುವಲ್ ಸಂಯೋಜಿತ ಸಾಧನಗಳನ್ನು ಅಳವಡಿಸಿಕೊಂಡು, ಉತ್ತಮ ಫಲಿತಾಂಶವನ್ನು ಹೊಂದುವ ಕ್ರಿಯಾಶೀಲವಾದ ವಿಧಾನಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶೈಕ್ಷಣಿಕ ವೇಳಾಪಟ್ಟಿಗಳ ಅನುಸರಣೆಯೊಂದಿಗೆ, ಆನ್‌ಲೈನ್ ವಿಧಾನದ ಮೂಲಕವೇ ವಿನ್ಯಾಸದ ತೀರ್ಪುಗಳು ಹಾಗೂ ಇತರೆ ಅಂದಾಜಿಸುವಿಕೆಗಳನ್ನು ರಚಿಸಲಾದವು. ಆನ್‌ಲೈನ್ ಮೂಲಕ ಪಠ್ಯದ ಸಲ್ಲಿಕೆ, ಶ್ರೇಣೀಕರಣಕ್ಕಾಗಿ ಮೌಲ್ಯಮಾಪನ ಹಾಗೂ ಅನುಕೂಲ ಒದಗಿಸುವಿಕೆಗಾಗಿ ಸಾಂಸ್ಥಿಕ ಪೋರ್ಟಲ್‌ಗಳ ಅಭಿವೃದ್ಧಿಯಂತಹ ಕ್ರಮಗಳನ್ನು ಪರಿಶೋಧಿಸಲಾದವು. ವಿಭಾಗವು ಜಾರಿಯಲ್ಲಿರುವ ಸೆಮಿಸ್ಟರ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಜುಲೈ ತಿಂಗಳ ಅಂತ್ಯಕ್ಕೆ ಮುಂದಿನ ಸೆಮಿಸ್ಟರ್ ಅನ್ನು ಆರಂಭಿಸಲಿದೆ.

ಆರ್ಕಿಟೆಕ್ಚರ್ ಅಂಡ್ ಪ್ಲಾನ್ನಿಂಗ್ ವಿಭಾಗದ ಬೋಧಕ ಸಿಬ್ಬಂದಿಗಳು, ಆನ್‌ಲೈನ್ ಕಲಿಕಾ ಪರಿಸರವ್ಯವಸ್ಥೆಯ ಅಳವಡಿಕೆ ಅನುಕೂಲವಾಗುವಂತೆ ವಿವಿಧ ಎನ್‌ಪಿಟಿಇಎಲ್ (ನ್ಯಾಷನಲ್ ಪ್ರೋಗ್ರಾಂ ಆನ್ ಟೆಕ್ನಾಲಜಿ ಎನ್‌ಹ್ಯಾನ್ಸ್ಡ್ ಲರ್ನಿಂಗ್) ಕೋರ್ಸ್ಗಳನ್ನು ಒದಗಿಸಿದರು. ಸಾಂಸ್ಥಿಕ ಬೆಂಬಲದೊAದಿಗೆ, ಭವಿಷ್ಯದ ಸಂಭವನೀಯ ಹೈಬ್ರಿಡ್ ನಮೂನೆಗಳ ಶಿಕ್ಷಣ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಡಿಜಿಟಲ್ ಮೂಲಭೂಸೌಕರ್ಯವನ್ನು ವೃದ್ಧಿಸಲಾಯಿತು. ಇಂಡೊ-ಯುಕೆ ಕಾರ್ಯಕ್ರಮದಡಿ, ನಿರ್ಮಿತ ಪರಿಸರಗಳ ವಿವಿಧ ವಿಷಯಗಳಲ್ಲಿ ಅತ್ಯುನ್ನತ ಮಟ್ಟದ ಸಂಶೋಧನೆಯನ್ನು ನಡೆಸುವ ಸಲುವಾಗಿ ವರ್ಚುವಲ್ ರಿಯಾಲಿಟಿ ಲ್ಯಾಬ್, ಸ್ಪರ್ಶ್ ಲ್ಯಾಬ್ (ಸ್ಪೇಷಿಯಲ್ ಪ್ಲಾನ್ನಿಂಗ್ ರೀಸರ್ಚ್), ಸಿವಿಕ್ ಡಿಸೈನ್ ಲ್ಯಾಬ್, ಕೈಗಾರಿಕಾ ವಿನ್ಯಾಸದ ಲ್ಯಾಬ್ ಹಾಗೂ ಫ್ಯಾಬ್ರಿಕೇಷನ್ ಲ್ಯಾಬ್‌ಗಳ ಜೊತೆಗೆ ನೆಟ್-ಜೀರೊ ಎಮಿಷನ್ಸ್ ಸಂಬಂಧಿತ ಪ್ರತಿಷ್ಠಿತ ಪ್ರಯೋಗಾಲಯಗಳನ್ನು ಸ್ಥಾಪಿಸಲಾಯಿತು.

ಆರ್ಕಿಟೆಕ್ಚರ್ ಅಂಡ್ ಪ್ಲಾನ್ನಿಂಗ್ ವಿಭಾಗದಲ್ಲಿ ಮೊದಲ ೮ ಸ್ಥಾನಗಳನ್ನು ಹಂಚಿಕೊAಡಿರುವ ಭಾರತದ ಇತರೆ ಶಿಕ್ಷಣ ಸಂಸ್ಥೆಗಳು ಈ ರೀತಿಯಿವೆ:

• ಡಿಪಾರ್ಟ್ಮೆಂಟ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನ್ನಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ರೊರ್ಕಿ.
• ಸ್ಕೂಲ್ ಆಫ್ ಪ್ಲಾನ್ನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್‌ಪಿಎ), ನವ ದೆಹಲಿ
• ಸರ್ ಜೆ.ಜೆ. ಕಾಲೇಜ್ ಆಫ್ ಆರ್ಕಿಟೆಕ್ಚರ್, ಮುಂಬೈ
• ಫಾಕಲ್ಟಿ ಆಫ್ ಆರ್ಕಿಟೆಕ್ಚರ್ ಅಂಡ್ ಎಕಿಸ್ಟಿಕ್ಸ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನವ ದೆಹಲಿ
• ಸ್ಕೂಲ್ ಆಫ್ ಪ್ಲಾನ್ನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್‌ಪಿಎ), ಭೂಪಾಲ್
• ಸ್ಕೂಲ್ ಆಫ್ ಪ್ಲಾನ್ನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್‌ಪಿಎ), ವಿಜಯವಾಡ
• ಸ್ಕೂಲ್ ಆಫ್ ಪ್ಲಾನ್ನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್‌ಎಪಿಎ), ಮೈಸೂರು ವಿಶ್ವವಿದ್ಯಾಲಯ
• ಡಿಪಾರ್ಟ್ಮೆಂಟ್ ಆಫ್ ಆರ್ಕಿಟೆಕ್ಚರ್, ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಸ್ರಾ, ರಾಂಚಿ
• ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನ್ನಿಂಗ್, ಮಣಿಪಾಲ್
• ಬಿಎಂಎಸ್ ಕಾಲೇಜ್ ಆಫ್ ಆರ್ಕಿಟೆಕ್ಚರ್, ಬೆಂಗಳೂರು

jk

 

ಕುಲಪತಿ ಸಂತಸ :

ದೇಶದ ಪ್ರತಿಷ್ಠಿತ ಸಂಸ್ಥೆಗಳ ಪೈಕಿ ಮೈಸೂರು ವಿವಿಯ ಸ್ಕೂಲ್ ಆಫ್ ಪ್ಲಾನ್ನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್‌ಎಪಿಎ) 7 ನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ. 2002 ರಲ್ಲೇ ಈ ವಿಭಾಗವನ್ನು ಖಾಸಗಿ ಸಂಸ್ಥೆ ನೇತೃತ್ವದಲ್ಲಿ ಆರಂಭಿಸಲಾಯಿತು. 2015 ರಲ್ಲಿ ಮೈಸೂರು ವಿವಿಯೇ ಇದನ್ನು ನಡೆಸಲು ಆರಂಭಿಸಿ, 2017 ರಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ತನಕ ವಿಭಾಗದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ದೇಶದ ಉನ್ನತ ಸಂಸ್ಥೆಗಳಲ್ಲಿ ಉತ್ತಮ ಸ್ಥಾನಮಾನ ಪಡೆದು ಉದ್ಯೋಗ ನಿರ್ವಹಿಸುತ್ತಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

 

ENGLISH SUMMARY :

Seventh place for Dept. of Architecture and Planning, UoM in India Today’s Best Colleges of India Survey

The Department of Architecture and Planning, University of Mysore, has been ranked 7th in the entire Country in the ‘India Today’s’ Best Colleges of India, 2021 Survey. The 25th India Today Best Colleges Survey delves into how institutes straddled the shift to digital education during the pandemic.

Keywords: India Today- Survey- University of Mysore- Department of Architecture and Planning