ಜೂನ್ 19ರಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ದಕ್ಷಿಣ ಆಫ್ರಿಕಾ ಟಿ-20 ಮ್ಯಾಚ್: 12ಕ್ಕೆ ಟಿಕೆಟ್ ಮಾರಾಟ

kannada t-shirts

ಬೆಂಗಳೂರು, ಜೂನ್ 05, 2022 (www.justkannada.in): ಜೂನ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯಾವಳಿ ನಡೆಯಲಿದೆ.

ಈ ಪಂದ್ಯದ ಟಿಕೆಟ್ ಬುಕ್ಕಿಂಗ್ ಜೂನ್ 12ರಂದು ಆನ್ ಲೈನ್ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಮಾರಾಟ ಆರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಹಿತಿ ಪ್ರಕಟಿಸಿದೆ.

ಈ ಪಂದ್ಯಾವಳಿಗೆ ಜೂನ್.12ರಂದು ಬೆಳಿಗ್ಗೆ 10 ಗಂಟೆಯಿಂದ 7 ಗಂಟೆಯವರೆಗೆ ಆನ್ ಲೈನ್ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತದೆ ಎಂದು ಕೆಎಸ್ ಸಿಎ ತಿಳಿಸಿದೆ.

ಎ ಅಪ್ಪರ್, ಬಿ ಅಪ್ಪರ್ ಹಾಗೂ ಲೋವರ್ ಸೀಟ್ ಟಿಕೆಟ್ ದರ ರೂ.2000, ಈ ಟಿಕೆಟ್ ಕಬ್ಬನ್ ರಸ್ತೆಯ ಗೇಟ್ ನಂಬರ್ 2ನಲ್ಲಿ ಮಾರಾಟ ಮಾಡಲಾಗುತ್ತದೆ.

ಜಿ ಅಪ್ಪರ್, ಲೋವರ್ 1 ಹಾಗೂ ಲೋವರ್-2 ಸೀಟ್ ಗಳಿಗೆ ರೂ.750, ಗೇಟ್ ನಂ.5ರ ಕಬ್ಬನ್ ರಸ್ತೆಯಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಡಿ ಕಾರ್ಪೊರೇಟ್ ಸೀಟ್ ದರ ರೂ.4000 ಆಗಿದ್ದು, ಕ್ವೀನ್ಸ್ ರಸ್ತೆಯ ಗೇಟ್ ನಂ.19ರಲ್ಲಿ ಮಾರಾಟ ಮಾಡಲಾಗುತ್ತದೆ. ಎನ್ ಸ್ಟ್ಯಾಂಡ್ ಸೀಟ್ ದರ ರೂ.5000, ಕ್ವೀನ್ಸ್ ರಸ್ತೆಯ ಗೇಟ್ ನಂ.18ರಲ್ಲಿ, ಎ-ಎಕ್ಸಿಕ್ಯೂಟಿವ್ ಸೀಟ್ ಟಿಕೆಟ್ ದರ ರೂ.6000, ಕ್ವೀನ್ಸ್ ರಸ್ತೆಯ ಗೇಟ್ ನಂ.18ರಲ್ಲಿ ಮಾರಾಟ ಮಾಡಲಾಗುತ್ತದೆ.

website developers in mysore