ಭಾರತದಲ್ಲಿ ಕೊರೋನಾ ಗುಣಮುಖ ಪ್ರಮಾಣ ಹೆಚ್ಚಳ:ಯಾರೂ ಭಯಪಡುವ ಅಗತ್ಯವಿಲ್ಲ -ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಮೋದಿ ಹೇಳಿಕೆ…

ನವದೆಹಲಿ,ಜೂ,16,2020(www.justkannada.in): ಭಾರತದಲ್ಲಿ ಕೊರೋನಾ ಗುಣಮುಖ ಪ್ರಮಾಣ ಹೆಚ್ಚಳವಾಗಿದೆ. ಕೊರೋನಾ ವಿರುದ್ದ ಹೋರಾಟಕ್ಕೆ ಭಾರತ ಸರ್ವಶಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಕೊರೋನಾ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಇಂದು 21 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿ ಮಾತನಾಡಿದರು. ಇನ್ನುಳಿದ 15 ರಾಜ್ಯಗಳ ಸಿಎಂಗಳೊಂದಿಗೆ ನಾಳೆ ಸಭೆ ನಡೆಸಲಿದ್ದಾರೆ.

ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಬ್ಬ ಭಾರತೀಯನ ರಕ್ಷಣೆಗೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ನಿಮ್ಮ ನಿಮ್ಮ ಕುಟುಂಬದ ರಕ್ಷಣೆಗೆ ನೀವು ಹೆಚ್ಚಿನ ಒತ್ತು ನೀಡಿ .ಕೊರೋನಾ ತಡೆಯಲು ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಿ. ಮಾಸ್ಕ್ ಇಲ್ಲದೆ ಹೊರಬರುವುದು ಕಲ್ಪನೆ ಕೂಡ ಸಾಧ್ಯವಿಲ್ಲ. ಭಾರತದಲ್ಲಿ ಕೊರೋನಾ ಗುಣಮುಖ ಪ್ರಮಾಣ ಶೇ.50ರಷ್ಟಿದೆ. ಭಾರತದಲ್ಲಿ ಕೊರೋನಾ ಗುಣಮುಖ ಪ್ರಮಾಣ ಹೆಚ್ಚಳವಾಗಿದೆ. ಕೊರೋನಾ ವಿರುದ್ದ ಹೋರಾಟಕ್ಕೆ ಭಾರತ ಸರ್ವಶಕ್ತವಾಗಿದೆ ಎಂದು ನುಡಿದರು.

ಭಾರತದ ಉತ್ಪಾದನಾ ಕ್ಷೇತ್ರ ಫ್ರೀಡೌನ್ ಬಳಿಕ ಚೇತರಿಸಿಕೊಂಡಿದೆ. ಈಗಾಗಲೇ ಕಚೇರಿ ಮಾರುಕಟ್ಟೆ ತೆರೆದಿವೆ. ಆರ್ಥಿಕತೆ ನಿಧಾನವಾಗಿ ಚೇತರಿಕೆಯಾಗುತ್ತಿದೆ. ಭಾರತದಲ್ಲಿ ಕರೊನಾ ವೈರಸ್​ನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ.50ಕ್ಕೂ ಹೆಚ್ಚು ಇದೆ. ಹಾಗಾಗಿ ಯಾರೂ ಭಯಪಡುವ ಅಗತ್ಯವಿಲ್ಲ. ಭಾರತದಲ್ಲಿ ಕರೊನಾದಿಂದ ಸಾವನ್ನಪ್ಪುತ್ತಿರುವುದನ್ನು ನೋಡಿದರೆ ನಮಗೆ ಆತಂಕ ಆಗುತ್ತದೆ. ಆದರೆ ಒಂದು ಸತ್ಯವನ್ನು ಎಲ್ಲರೂ ತಿಳಿಯಬೇಕು. ಭಾರತದಲ್ಲಿ ಕೊವಿಡ್​-19ನಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣ ತುಂಬ ಕಡಿಮೆ ಇದೆ. ನಮ್ಮ ದೇಶ ಕರೊನಾ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Key words: India -powerful – fight- against- Corona-PM –Narendra Modi