ಇಂಡಿಯಾ-ಇಂಗ್ಲೆಂಡ್ ಓಡಿಐ: ನಿರ್ಣಾಯಕ ಫೈನಲ್ ಪಂದ್ಯ ಇಂದು

ಬೆಂಗಳೂರು, ಮಾರ್ಚ್ 28, 2021 (www.justkannada.in): ಇಂದು ಟೀಂ ಇಂಡಿಯಾ, ಇಂಗ್ಲೆಂಡ್ ಗೆ ನಡುವಿನ ಏಕದಿನ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಏಕದಿನ ಪಂದ್ಯ ನಡೆಯಲಿದೆ.

ಎರಡು ಪಂದ್ಯಗಳಿಂದ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿರುವ ಕಾರಣ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.

ಭಾರತ ಈ ಪಂದ್ಯಕ್ಕೆ ಬೌಲರ್ ಗಳ ಬದಲಾವಣೆ ಮಾಡುವ ಸಾಧ್ಯತೆಯಿದೆ. ಕುಲದೀಪ್ ಯಾದವ್ ಹೊರಗಿಟ್ಟು ಯಜುವೇಂದ್ರ ಚಾಹಲ್ ಮತ್ತೆ ತಂಡಕ್ಕೆ ವಾಪಸಾಗಬಹುದು.

ಮಧ‍್ಯಾಹ್ನ 1.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.