ಭಾರತ-ಇಂಗ್ಲೆಂಡ್ ಚೆನ್ನೈ ಟೆಸ್ಟ್: ಟೀಂ ಇಂಡಿಯಾ ಬೌಲರ್ ಗಳ ಪರದಾಟ!

ಚೆನ್ನೈ, ಫೆಬ್ರವರಿ 06, 2021 (www.justkannada.in): ಭಾರತ-ಇಂಗ್ಲೆಂಡ್ ನಡುವೆ ಚೆನ್ನೈನಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಲ್ಲೂ ವಿಕೆಟ್ ಪಡೆಯಲು ಟೀಂ ಇಂಡಿಯಾ ಬೌಲರ್ ಗಳು ಪರದಾಡುತ್ತಿದ್ದಾರೆ.

ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 3 ವಿಕೆಟ್‌ಗಳಿಗೆ 355 ರನ್‌ ಗಳಿಸಿದೆ. ಇಂಗ್ಲೆಂಡ್ ನಾಯಕ ರೂಟ್ 156ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಟೀಂ ಇಂಡಿಯಾ ಬೌಲರ್​ಗಳು ಆದಷ್ಟು ಬೇಗ ರೂಟ್​ನನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಬೇಕಿದೆ.