ದೇಶದಲ್ಲಿ ಒಂದೇ ದಿನ 22,771 ಮಂದಿಗೆ ವಕ್ಕರಿಸಿದ ಮಹಾಮಾರಿ ಕೊರೋನಾ…

Promotion

ನವದೆಹಲಿ,ಜು,4,2020(www.justkannada.in):  ದೇಶದಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು , ಒಂದೇ ದಿನ 22,771 ಮಂದಿಗೆ  ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಈ ಕುರಿತಂತೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ನೀಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕು ದಾಖಲೆಯನ್ನೇ ಸೃಷ್ಟಿಸಿದೆ. 22,771 ಮಂದಿಗೆ ಮಾರಕ ಸೋಂಕು ವಕ್ಕರಿಸಿದ್ದು  ಕಳೆದ ಒಂದು ದಿನದಲ್ಲಿ ಕೊರೊನಾಗೆ 442 ಮಂದಿ ಬಲಿಯಾಗಿದ್ದಾರೆ.india-22771-people-corona-positive-single-day

ಇನ್ನು ದೇಶದಲ್ಲಿ ಈವರೆಗೆ ಡೆಡ್ಲಿ ಸೋಂಕಿಗೆ 18,655 ಮಂದಿ ಬಲಿಯಾಗಿದ್ದಾರೆ.  ಒಟ್ಟು ಸೋಂಕಿತರ ಸಂಖ್ಯೆ, 6,48,315 ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3,94,227 ಮಂದಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಸದ್ಯ 2,35,433 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Key words: india- 22,771 people –corona positive-single day.