ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಿದರಳ್ಳಿ ಸೇತುವೆ ಮುಳುಗಡೆ ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಮೈಸೂರು,ಸೆಪ್ಟೆಂಬರ್,20,2020(www.justkannada.in) : ಗೇಟ್ ಹಾಕದೆ, ಸೈರನ್ ಮಾಡದೇ ಏಕಾಏಕಿ ನದಿಗೆ ಕಬಿನಿ  ಜಲಾಶಯದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಬಿಟ್ಟ ಹಿನ್ನೆಲೆ ಸೇತುವೆ ಮುಳುಗಡೆಯಾಗಿದೆ.

jk-logo-justkannada-logo

ತಡರಾತ್ರಿ ಎಚ್.ಡಿ.ಕೋಟೆಯ ಕಬಿನಿ ಡ್ಯಾಂನಲ್ಲಿ ಘಟನೆ ನಡೆದಿದೆ. ಯಾವುದೇ ಮುನ್ಸೂಚನೆ, ಸೈರನ್ ಇಲ್ಲದೆ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಬಿಡುವ ಮೂಲಕ ಜಲಾಶಯದ ಅಧಿಕಾರಿಗಳು ಎಡವಟ್ಟು ಮಾಡಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳು ಡ್ಯಾಂ ಭರ್ತಿಯಾಗ್ತಿದೆ ಎಂದು ಮಾಹಿತಿ ನೀಡದೆ, ನದಿಗೆ ನೀರು ಬಿಟ್ಟಿದ್ದಾರೆ. ಹೀಗಾಗಿ, ಡ್ಯಾಂ ನಿಂದ ಅಪಾರ ಪ್ರಮಾಣದ ನೀರು ಸೇತುವೆ ಮೇಲೆ‌ ಹರಿದಿದೆ. ಜೀವ ಭಯದಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ಜನರು ತೆರಳಿದ್ದಾರೆ. ತಕ್ಷಣವೇ ಡ್ಯಾಂನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು,  ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ನೀರಿನ ಪ್ರಮಾಣ ಕಡಿಮೆ ಮಾಡಿರುವುದು ತಿಳಿದು ಬಂದಿದೆ.

Increased-anxiety-locals-negligence-authorities-sinking- Bidarali-Bridge

ಸಂಚಾರಿಗಳಿಗೆ ಶಾಕ್

ಯಾವುದೇ ಅಳತೆ ಇಲ್ಲದೆ ನೀರು ಹರಿಸಿದ ಸಿಬ್ಬಂದಿ. ರಸ್ತೆ ಮಾರ್ಗದ ಸೇತುವೆ ಮೇಲೆ‌ ತೆರಳುತ್ತಿದ್ದವರಿಗೆ ಶಾಕ್ ಉಂಟುಮಾಡಿದೆ. ಡ್ಯಾಂ ಮುಂಭಾದಲ್ಲಿರುವ ಬಿದರಳ್ಳಿ ಸಂಪರ್ಕದ ಸೇತುವೆ ಮೇಲೆ ಏಕಾಏಕಿ ನೀರು ಹರಿದರಿಂದ ಜನರು ಆತಂಕಗೊಂಡಗೊಂಡಿದ್ದಾರೆ.

ಅಧಿಕಾರಿಗಳ ಯಡವಟ್ಟಿಗೆ ಸಾರ್ವಜನಿಕರ ಹಿಡಿ ಶಾಪಹಾಕಿದ್ದು, ಇದೀಗ ಡ್ಯಾಂ ಭರ್ತಿಯಾಗ್ತಿದೆ ಎಂದು 35ಸಾವಿರ ಕ್ಯೂಸೆಕ್ಸ್ ನೀರು ಹರಿಸುವುದಾಗಿ ತಿಳಿಸಿದ್ದಾರೆ.

key words : Increased-anxiety-locals-negligence-authorities-sinking- Bidarali-Bridge