ಕೊರೋನಾ ಸೋಂಕು ನಿಯಂತ್ರಿಸಲು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹೆಚ್ಚಳ – ಮೈಸೂರು ಡಿಸಿ ಅಭಿರಾಂ ಜೀ ಶಂಕರ್….

Promotion

ಮೈಸೂರು,ಆ,15,2020(www.justkannada.in): ಮೈಸೂರು ಜಿಲ್ಲೆಯಲ್ಲಿ  ಹೆಚ್ಚುತ್ತಿರುವ ಕೊರೋನಾ ಸೋಂಕು ನಿಯಂತ್ರಿಸಲು ಹೆಚ್ಚೆಚ್ಚು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದರು.jk-logo-justkannada-logo

ಕೋವಿಡ್ ನಿರ್ವಹಣೆ ಕುರಿತು ಇಂದು ನಡೆದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಡಿಸಿ ಅಭಿರಾಮ್ ಜೀ ಶಂಕರ್, ಕೊರೊನಾದಿಂದ ಸಾವನ್ನಪ್ಪುವವರ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಶುಚಿತ್ವ ಕಾಪಾಡಲು ಹಾಗೂ ಸಮರ್ಪಕವಾಗಿ ಆಹಾರ ಪೂರೈಕೆಗೆ ಒತ್ತು ನೀಡಲಾಗುವುದು. ಕೊರೋನಾ ಸೋಂಕಿತರು ಸಾವನ್ನಪ್ಪಿದರೆ ಅಂತ್ಯಕ್ರಿಯೆ ವೇಳೆ ಅವರ ಕುಟುಂಬ ಸದಸ್ಯರು ಹತ್ತು ಅಡಿ ಅಂತರದಿಂದ ನೋಡಲು ಅವಕಾಶ ನೀಡಲಾಗುವುದು. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಇದ್ದ ನ್ಯೂನತೆಗಳನ್ನು ಸರಿಪಡಿಸಲಾಗಿದೆ. ಹೋಂ ಐಸೋಲೇಷನ್ ಗೆ ಅವಕಾಶ ಇದೆ. ಈ ನಡುವೆ ಜನರು ಸ್ವಯಂ ಪ್ರೇರಿತರಾಗಿ ಬಂದು ಧೈರ್ಯದಿಂದ ಕೋವಿಡ್ ಟೆಸ್ಟ್ ಮಾಡಿಸಿ.ಎಂದು ತಿಳಿಸಿದರು.increased-rapid-antigen-test-control-corona-infection-mysore-dc-abhiram-jee-shankar

ಜಿಲ್ಲೆಯಲ್ಲಿ ಸ್ಟಾಫ್ ನರ್ಸ್ ಹಾಗೂ ಡಿ ಗ್ರೂಪ್ ನೌಕರರ ಕೊರತೆ….

ಮೈಸೂರು ಜಿಲ್ಲೆಯಲ್ಲಿ ಸ್ಟಾಫ್ ನರ್ಸ್ ಹಾಗೂ ಡಿ. ಗ್ರೂಪ್ ನೌಕರರ ಕೊರತೆ ಇದೆ. ಹೊಸದಾಗಿ ಸೇರಿದ ಸಿಬ್ಬಂದಿ ಕೂಡಾ ಹೆದರಿ ವಾಪಸ್ ಹೋಗುತ್ತಿದ್ದಾರೆ. ಹೆಚ್ಚುವರಿ ಸ್ಯಾಲರಿ ನೀಡಿದರೂ ಕೂಡ ಕೆಲಸ ಬಿಡುತ್ತಿದ್ದಾರೆ. ಅವರಿಗೆ ಮತ್ತಷ್ಟು ಇನ್ಸೆಂಟಿವ್ ಹಾಗೂ ಇನ್ಸೂರೆಸ್ಸ್ ನೀಡಿ ಧೈರ್ಯ ತುಂಬಬೇಕು. ಈಗಾಗಲೇ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ಭರವಸೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಹೇಳಿದರು.

Key words: Increased -Rapid Antigen Test – Control -Corona -Infection-Mysore DC- Abhiram Jee Shankar.