ವಾಯುಮಾಲಿನ್ಯ ಹೆಚ್ಚಾದ ಹಿನ್ನೆಲೆ: ದೆಹಲಿಯಲ್ಲಿ ಶಾಲಾ-ಕಾಲೇಜುಗಳು ಬಂದ್.

ನವದೆಹಲಿ,ನವೆಂಬರ್,17,2021(www.justkannada.in):  ನವದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳವಾದ ಹಿನ್ನೆಲೆ ಮುಂದಿನ ಆದೇಶದವರೆಗೆ ಅಲ್ಲಿನ ಶಾಲಾ- ಕಾಲೇಜುಗಳನ್ನ ಬಂದ್ ಮಾಡಲಾಗಿದೆ.

ವಾಯು ಗುಣಮಟ್ಟ ಇನ್ನಷ್ಟು ಅಪಾಯದ ಹಂತಕ್ಕೆ ಇಳಿದಿದ್ದು, ಅಲ್ಲೀಗ ಭಾಗಶಃ ಲಾಕ್​ಡೌನ್​​ ಆಗಲಿದೆ. ರಾಷ್ಟ್ರರಾಜಧಾನಿ ಮತ್ತು ದೆಹಲಿಯೊಳಗೆ ಮತ್ತು ಸುತ್ತಮುತ್ತಲೂ ಇರುವ ಎಲ್ಲ ಶಾಲೆ-ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಂದಿನ ಆದೇಶದವರೆಗೆ ಬಂದ್ ಮಾಡಲು ನಿನ್ನೆ ನಡೆದ ತುರ್ತು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಶಾಲಾ ಕಾಲೇಜುಗಳನ್ನು ಮುಚ್ಚುವ ಜತೆಗೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಉದ್ಯೋಗಿಗಳು ಮಾತ್ರ ಕೆಲಸ ಅವಕಾಶ ನೀಡಿದ್ದು,  ಇನ್ನುಳಿದ ಶೇ.50ರಷ್ಟು ಜನರಿಗೆ ವರ್ಕ್​ ಫ್ರಂ ಹೋಂಗೆ ಸೂಚಿಸಲಾಗಿದೆ. ಇದು ನವೆಂಬರ್​ 21ರವರೆಗೆ ಜಾರಿಯಲ್ಲಿರಲಿದೆ. ಹಾಗೇ, ಅಗತ್ಯ ವಸ್ತುಗಳನ್ನು ತರುವ ವಾಹನಗಳನ್ನು ಹೊರತುಪಡಿಸಿ ದೊಡ್ಡದೊಡ್ಡ ಟ್ರಕ್​​ಗಳನ್ನು ದೆಹಲಿಗೆ ಪ್ರವೇಶ ಮಾಡಬಾರದು ಎಂದು ಹೇಳಲಾಗಿದೆ. ಹಾಗೇ, ನವೆಂಬರ್​ 21ರವರೆಗೆ ನಗರದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ನಿರ್ಮಾಣ ಕಾರ್ಯವನ್ನೂ ನಿಲ್ಲಿಸುವಂತೆ ಸೂಚಿಸಲಾಗಿದೆ.

ಜತೆಗೆ ದೆಹಲಿಯ 300 ಕಿಮೀ ವ್ಯಾಪ್ತಿಯಲ್ಲಿರುವ 11 ಉಷ್ಣಸ್ಥಾವರಗಳನ್ನು ನವೆಂಬರ್​ 30ರವರೆಗೆ ನಿಷ್ಕ್ರಿಯಗೊಳಿಸಲೂ ಹೇಳಲಾಗಿದೆ.

Key words: Increased – air pollution-School-Colleges –Bandh- Delhi.