ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ಸಂಬಂಧ ತಕ್ಷಣ ಅಧಿವೇಶನ ಕರೆದು ನಿರ್ಣಯ ಕೈಗೊಳ್ಳಿ-ಸಿದ್ಧರಾಮಯ್ಯ ಆಗ್ರಹ.

ಬೆಂಗಳೂರು,ಅಕ್ಟೋಬರ್,7,2022(www.justkannada.in): ಎಸ್.ಸಿ ಮತ್ತು ಎಸ್ .ಟಿ ಮೀಸಲಾತಿ ಹೆಚ್ಚಳಕ್ಕೆ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು ಈ ಸಂಬಂಧ ತಕ್ಷಣ ಅಧಿವೇಶನ ಕರೆದು ಚರ್ಚಿಸಿ ಅಧಿಸೂಚನೆ ಹೊರಡಿಸಿ ಎಂದು ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.

ಸರ್ವಪಕ್ಷ ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಮೀಸಲಾತಿ ಹೆಚ್ಚಳ ಸಂಬಂಧ 2019ರಲ್ಲಿ ನಾಗಮೋಹನ್ ದಾಸ್ ಆಯೋಗ ರಚನೆ ಆಗಿತ್ತು.  2020 ರಲ್ಲಿ ಬಿಜೆಪಿ ಸರ್ಕಾರದ ವೇಳೆ ವರದಿ ಕೊಟ್ಟಿತ್ತು.  ವರದಿ ನೀಡಿ 2 ವರ್ಷ 3 ತಿಂಗಳಾಗಿದೆ. ಎಸ್.ಟಿಯಲ್ಲಿ ಎಸ್ ಸಿ ಜನಾಂಗದ ಜನ ಸಂಖ್ಯೆ ಹೆಚ್ಚಾಗಿದೆ.  ನಾಗಮೋಹನ್ ದಾಸ್ ವರದಿ ಜಾರಿಗೆ ಸರ್ಕಾರ ಒಪ್ಪಿಗೆ ನೀಡಿದೆ.  ನಮ್ಮ ಶಾಸಕರು ವರದಿ ಜಾರಿಗೆ ಒತ್ತಾಯಿಸಿದ್ದರು.

ಹೀಗಾಗಿ ಸರ್ಕಾರ ತಕ್ಷಣ ಅಧಿವೇಶನ ಕರೆದು ಚರ್ಚಿಸಿ ಅಧಿಸೂಚನೆ ಹೊರಡಿಸಬೇಕು.   ಕೇಂದ್ರಕ್ಕೆ ಶಿಫಾರಸು ಮಾಡಿ ಮೀಸಲಾತಿ ಹೆಚ್ಚಿಸಿ.  ಕೇಂದ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಸಮಸ್ಯೆ ಇಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.

Key words: increase – SC – ST -reservation-former CM-Siddaramaiah