ಅಗತ್ಯ ವಸ್ತುಗಳ ಬೆಲೆ ಹೆಚ್ಚಳ: ಜನರು ಜೀವನ ನಡೆಸಬೇಕಾ, ಬೀದಿ ಪಾಲಾಗಬೇಕಾ? ಸರ್ಕಾರಕ್ಕೆ ಕಾಂಗ್ರೆಸ್ ಚಾಟಿ..

kannada t-shirts

ಬೆಂಗಳೂರು,ಮೇ,28,2022(www.justkannada.in):  ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ರಾಜ್ಯ ಕಾಂಗ್ರೆಸ್ ಘಟಕ ಚಾಟಿ ಬೀಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಅಗತ್ಯ ವಸ್ತುಗಳ ಬೆಲೆ ಸೇರಿದಂತೆ ಎಲ್ಲದರ ದರವೂ ಹೆಚ್ಚಾಗುತ್ತಿದೆ.ವರ್ಷಕ್ಕೆ ಶೇಕಡ 30ರಷ್ಟು ನಿರ್ವಹಣಾ ವೆಚ್ಚ ಅಧಿಕವಾಗುತ್ತಿದೆ. ಆದರೆ ವೇತನ ( Salary ) ಮಾತ್ರ ಶೇಕಡ 5-8ರಷ್ಟು ಮಾತ್ರ ಏರಿಕೆ ಆಗುತ್ತಿದೆ. ಇದರಿಂದ ಜನರು ಜೀವನ ನಡೆಸಬೇಕಾ, ಬೀದಿ ಪಾಲಾಗಬೇಕಾ? ಎಂದು ಪ್ರಶ್ನಿಸಿದೆ.

ಸೋನಿಯಾ ಗಾಂಧಿ ಸೆರಗು ಹಿಡಿದುಕೊಂಡು ಓಡಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆರ್‌ಎಸ್‌ಎಸ್‌, ಮೋದಿ ಅವರನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಹೇಳಿಕೆ ನೀಡಿದ್ದ ಶಾಸಕ ಕೆ.ಎಸ್. ಈಶ್ವರಪ್ಪಗೆ ಟಾಂಗ್ ನೀಡಿರುವ ಕಾಂಗ್ರೆಸ್, ಈ ಈಶ್ವರಪ್ಪನ ಬಾಯಿ ಕೊಳೆತು ನಾರುತ್ತಿರುವ ಬಚ್ಚಲೇ ಸರಿ. ಈ ಈಶ್ವರಪ್ಪನ ಹಣದಾಹಕ್ಕೆ ಕಮಿಷನ್ ದಾಹಕ್ಕೆ ಅಮಾಯಕ ಸಂತೋಷ್ ಪಾಟೀಲ್ ಹೆಣವಾದ. ಇಂಥ ಲಜ್ಜೆಗೇಡಿ ಮನುಷ್ಯನಿಗೆ ಸಿದ್ದರಾಮಯ್ಯನವರ ಬಗ್ಗೆ ಮಾತಾಡುವ ನಯಾಪೈಸೆ ಯೋಗ್ಯತೆಯೂ ಇಲ್ಲ ಎಂದು ಕಿಡಿಕಾರಿದೆ.

Key words: Increase – price –  People -Congress – government

website developers in mysore