ಶಿಕ್ಷಣ ಇಲಾಖೆಯಿಂದ ಶಾಲಾ ಪ್ರವೇಶಾತಿ ಕನಿಷ್ಠ ವಯೋಮಿತಿ ಹೆಚ್ಚಳ.

ಬೆಂಗಳೂರು, ಜುಲೈ 27, 2022 (www.justkannada.in): ಶಿಕ್ಷಣ ಇಲಾಖೆಯ ಹೊಸ ಸಾರ್ವಜನಿಕ ಸೂಚನೆಗಳ ಪ್ರಕಾರ, ಕರ್ನಾಟಕದಲ್ಲಿ 1ನೇ ತರಗತಿ ಪ್ರವೇಶಾತಿಯ ಕನಿಷ್ಠ ವಯೋಮಿತಿಯನ್ನು 6 ವರ್ಷಗಳಿಗೆ ಬದಲಾಯಿಸಲಾಗಿದೆ.

ಜೂನ್ 1 ರಿಂದ ಆರಂಭವಾದಂತೆ, 1ನೇ ತರಗತಿಗೆ ಪ್ರವೇಶಾತಿ ಬಯಸುವ ಮಗುವಿಗೆ ಕನಿಷ್ಠ 6 ವರ್ಷಗಳು ತುಂಬಿರಬೇಕು, ಈ ನಿಯಮ ಪ್ರಸ್ತುತ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸಲಿದೆ.

೨೦೧೭ರಲ್ಲಿ ಕರ್ನಾಟಕದಲ್ಲಿ 1ನೇ ತರಗತಿಯ ಕನಿಷ್ಠ ವಯೋಮಿತಿ ೫ ವರ್ಷ ೧೦ ತಿಂಗಳಿಗೆ ನಿಗಧಿಪಡಿಸಲಾಗಿತ್ತು. ಆದರೆ ೨೦೧೮ರಲ್ಲಿ ಅದನ್ನು ೫ ವರ್ಷ, ೫ ತಿಂಗಳಿಗೆ ಬದಲಾಯಿಸಲಾಯಿತು.

ಈಗಿನ ನಿಯಮ ಆರ್‌ ಟಿಇ ನಿಯಮಗಳಿಗೆ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿದೆ. ಭಾರತದ 21 ಇತರೆ ರಾಜ್ಯಗಳೂ ಸಹ ಈ ನಿಯಮವನ್ನು ಈಗಾಗಲೇ ಅನುಷ್ಠಾನಗೊಳಿಸಿದೆ, ಎನ್ನುವುದು ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಈ ನಿರ್ಧಾರವನ್ನು ಟೀಕಿಸಿರುವ ಶಿಕ್ಷಣ ತಜ್ಞ ಡಿ. ಶಶಿ ಕುಮಾರ್ ಅವರು, “ಶಿಕ್ಷಣ ಇಲಾಖೆಯು ಗೊಂದಲವನ್ನು ಸೃಷ್ಟಿಸಿದೆ. ಈ ಶೈಕ್ಷಣಿಕ ವರ್ಷದಲ್ಲಿ ನಾವು ಈಗಾಗಲೇ ಎರಡು ತಿಂಗಳನ್ನು ಪೂರ್ಣಗೊಳಿಸಿದ್ದೇವೆ. ಈ ಹೊಸ ನಿಯಮದಿಂದ ಅನೇಕ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಈ ನಿಯಮವನ್ನು ಮುಂದಿನ ವರ್ಷಕ್ಕೆ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆಯನ್ನು ಕೋರುತ್ತೇವೆ,” ಎಂದಿದ್ದಾರೆ.

ಸುದ್ದಿ ಮೂಲ: ಬೆಂಗಳೂರು ಮಿರರ್

Key words: Increase – minimum- age -limit – school -admission – Education Department.