ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿರುವ ತಾಯಿ ಚಾಮುಂಡೇಶ್ವರಿ: ಆಷಾಢ ಶುಕ್ರವಾರ, ವರ್ಧಂತಿಯ ದಿನದ ಆದಾಯದಲ್ಲಿ ಹೆಚ್ಚಳ…

ಮೈಸೂರು,ಜು,27,2019(www.justkannada.in): ವರ್ಷದಿಂದ ವರ್ಷಕ್ಕೆ ಮೈಸೂರಿನ ತಾಯಿ  ಚಾಮುಂಡೇಶ್ವರಿ ಶ್ರೀಮಂತಳಾಗುತ್ತಿದ್ದು, ಈ ವರ್ಷದ  ಆಷಾಢ ಶುಕ್ರವಾರ  ವರ್ಧಂತಿಯ ದಿನದ ಆದಾಯದಲ್ಲಿ ಹೆಚ್ಚಳವಾಗಿದೆ.

ಧಾರ್ಮಿಕ ದತ್ತಿ ಇಲಾಖೆಯು ಆಷಾಢ ಶುಕ್ರವಾರ ಮತ್ತು  ವರ್ಧಂತಿಯ ದಿನದ ಆದಾಯ  ದಾಖಲೆ ಬಿಡುಗಡೆ ಮಾಡಿದ್ದು, ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಕೋಟಿ ಕೋಟಿ ಹಣ ಹರಿದು ಬಂದಿದೆ.  ಈ ಬಾರಿ ಚಾಮುಂಡೇಶ್ವರಿ ದರ್ಶನಕ್ಕೆ  ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದ ಹಿನ್ನೆಲೆ ಕಳೆದ ಸಾಲಿಗಿಂತ 48 ಲಕ್ಷ ರೂ ಹೆಚ್ಚಿನ ಆದಾಯ ಬಂದಿದೆ.

ಕಳೆದ ಬಾರಿ 1,02,17,200  ರೂ ಸಂಗ್ರಹವಾಗಿತ್ತು.. ಈ ವರ್ಷ ಸುಮಾರು 1,50,,15,870 ರೂ ಹಣ ಸಂಗ್ರಹವಾಗಿದೆ. ಈ ಮೂಲಕ 48 ಲಕ್ಷ ರೂ ಹೆಚ್ಚಿನ ಆದಾಯ ಬಂದಿದೆ. ಕೇವಲ ಟಿಕೆಟ್ ಹಣದಿಂದಲೇ ತಾಯಿ ಚಾಮುಂಡೇಶ್ವರಿಯ ಮಡಿಲು ತುಂಬಿದ್ದು. 50-300 ರೂಗಳ ಟಿಕೇಟ್ ನಿಂದಲೇ  ಸುಮಾರು 1.50  ಕೋಟಿ ಹಣ ಸಂಗ್ರಹವಾಗಿದೆ.

Key words: Income-increase –mysore- chamundi hills- temple