ಕೊರೋನಾ ತಡೆಗೆ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಿ- ಸಭೆಯಲ್ಲಿ ಮಾಜಿ ಸಚಿವ ರಾಮಲಿಂಗರೆಡ್ಡಿ ಆಗ್ರಹ..

Promotion

ಬೆಂಗಳೂರು,ಏಪ್ರಿಲ್,19,2021(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ತಡೆಗಾಗಿ 144 ಸೆಕ್ಷನ್ ಜಾರಿ ಮಾಡಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ರಾಮಲಿಂಗರೆಡ್ಡಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.jk

ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಬೆಂಗಳೂರಿನ ಶಾಸಕರು ಸಚಿವರು, ಸಂಸದರ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ಶಾಸಕ ರಾಮಲಿಂಗರೆಡ್ಡಿ, ಕೊರೋನಾ ತಡೆಗೆ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಿ. ಲಾಕ್ ಡೌನ್ ಏನಾದರೂ ಮಾಡಿದರೇ ನಮ್ಮನ್ನೂ ಪರಿಗಣಿಸಿ.  ಬೆಂಗಳೂರಿನ 8 ವಲಯಗಳಿಗೆ ಸಚಿವರನ್ನ ನೇಮಿಸಿ , ಹೊಣೆಗಾರಿಕೆ ನೀಡಿ ಎಂದು ತಿಳಿಸಿದರು.

ಹಾಗೆಯೇ ಲಾಕ್ ಡೌನ್ ಮಾಡಿದರೇ ಅಗತ್ಯ ವಸ್ತುಗಳನ್ನ ಪೂರೈಸಿ. ಕೊರೊನಾ ಸೋಂಕಿತರಿಗೆ ಲಸಿಕೆ ಸರಿಯಾದ ಸಮಯಕ್ಕೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಆಕ್ಸಿಜನ್ ಸಿಗದೆ ಸಾಯುತ್ತಿದ್ದಾರೆ. ಒಂದು ವರ್ಷದಿಂದ ನಾವು ಸಹಕಾರ ನೀಡಿದ್ದೇವೆ. ಆದ್ರೂ ಕೊರೋನಾ ತಡೆಗೆ ಸಿದ್ದತೆ ಮಾಡಿಕೊಂಡಿಲ್ಲ ಎಂದು ರಾಮಲಿಂಗರೆಡ್ಡಿ ಕಿಡಿಕಾರಿದರು.implement-section-144-bangalore-corona-former-minister-ramalingareddy

ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರಿಗೆ ಬೆಡ್ ನೀಡುತ್ತಿಲ್ಲ. ಆದರೂ ಸರ್ಕಾರ ಅವರಿಗೆ ಎಚ್ಚರಿಕೆ ನೀಡುತ್ತಿಲ್ಲ ಎಂದು ಹರಿಹಾಯ್ದರು.

Key words: Implement -Section 144 – Bangalore –Corona-Former minister -Ramalingareddy