ಐಎಂಎ ವಂಚನೆ ಪ್ರಕರಣ: ಎಸ್ ಐಟಿಯಿಂದ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿಚಾರಣೆ…

ಬೆಂಗಳೂರು,ಆ,2,2019(www.justkannada.in): ಮೇಲ್ನೋಟಕ್ಕೆ ಐಎಂಎ ಮಾಲೀಕ ಮನ್ಸೂರ್ ಗೆ ಕ್ಲೀನ್ ಚಿಟ್ ಕೊಡಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರನ್ನ ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಐಎಂಎ ವಂಚನೆ ಪ್ರಕರಣ ಸಂಬಂಧ ಇಂದು  ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಎಸ್ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಡಿಸಿಪಿ ಗಿರೀಶ್, ಡಿಐಜಿ ರವಿಕಾಂತೇಗೌಡರಿಂದ ಸತತ 2 ಗಂಟೆಗಳ ಕಾಲ ಅಜಯ್ ಹಿಲೋರಿ ಅವರ ವಿಚಾರಣೆ ನಡೆಯಿತು.

ಐಎಂಎ ಅಕ್ರಮ ಕುರಿತು ತನಿಖೆ ನಡೆಸುವಂತೆ ಆರ್ ಬಿಐ ಸರ್ಕಾರಕ್ಕೆ ಸೂಚನೆ ನೀಡಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರುಕಟ್ಟೆ ಮತ್ತು ಗುಪ್ತಚರ ವಿಭಾಗದ ಸೂಚನೆ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಕೆಳಹಂತದ ಪೊಲೀಸರು ಸರಿಯಾಗಿ ತನಿಖೆ ನಡೆಸಲು ಬೀಡದ ಆರೋಪ. ಮೇಲ್ನೋಟಕ್ಕೆ ಮನ್ಸೂರ್ ಗೆ ಕ್ಲೀನ್ ಚಿಟ್ ಕೊಡಿಸಿದ್ದಾರೆ ಎಂಬ ಆರೋಪವನ್ನ ಅಜಯ್ ಹಿಲೋರಿ ಎದುರಿಸುತ್ತಿದ್ದಾರೆ.

ಐಎಂಎ ವಂಚನೆ ಬಗ್ಗೆ ಮೊದಲ ಬಾರಿ ದೂರು ಬಂದ್ರು ದೂರು ದಾಖಲಿಸಲು ಹಿಂದೇಟು ಹಾಕಿದ್ದು ಹಗರಣದ ಬಗ್ಗೆ ಮೊದಲೇ ಮಾಹಿತಿ ಇದ್ರು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ

ಅಜಯ್ ಹಿಲೋರಿ2018 ರಲ್ಲಿ ಪೂರ್ವ ವಿಭಾಗ ಡಿಸಿಪಿಯಾಗಿದ್ದರು.  ಸದ್ಯ ನಗರ ಒಂದನೇ ಸಶಸ್ತ್ರ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದಾರೆ.

Key words: IMA -fraud case-  IPS officer- Ajay Hillary – Inquiry- SIT