ಐಎಂಎ ಬಹುಕೋಟಿ ವಂಚನೆ ಕೇಸ್: ಕಾರಣ ನೀಡಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ಮಾಜಿ ಸಚಿವ ರೋಷನ್ ಬೇಗ್

ಬೆಂಗಳೂರು,ಜು,15,2019(www.justkannada.in): ಹೂಡಿಕೆದಾರರಿಗೆ ಐಎಂಎ ಕಂಪನಿಯಿಂದ ಬಹುಕೋಟಿ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಇಂದು ಸಹ ಎಸ್ ಐಟಿ ವಿಚಾರಣೆಗೆ ಮಾಜಿ ಸಚಿವ ರೋಷನ್ ಬೇಗ್ ಗೈರಾಗಿದ್ದಾರೆ. ಈ ನಡುವೆ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರೋ ವಿಶೇಷ ತನಿಖಾ ತಂಡದ ಅಧಿಕಾರಿಗಳ  ಬಳಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.  ಹುಟ್ಟುಹಬ್ಬ ಹಜ್ ಯಾತ್ರೆ ವಿಧಾನಸಭೆ ಬೆಳವಣಿಗೆ ಕಾರಣ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ  ರೋಷನ್ ಬೇಗ್ ಮನವಿ ಮಾಡಿದ್ದಾರೆ. ತಮ್ಮ ಪಿಎಯನ್ನ ಎಸ್ ಐಟಿಗೆ ಕಚೇರಿಗೆ ಕಳುಹಿಸಿ  ತಮ್ಮ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ರೋಷನ್ ಬೇಗ್ ಹಾಜರಾಗಾಬೇಕಿತ್ತು. ಈ ನಡುವೆ ಜುಲೈ 25 ರಂದು ವಿಚಾರಣೆಗೆ ಹಜರಾಗುವುದಾಗಿ ರೋಷನ್ ಬೇಗ್ ತಿಳಿಸಿದ್ದಾರೆ. ಆದರೆ ಎಸ್ ಐಟಿ 19 ರಂದೇ ಹಾಜರಾಗುವಂತೆ ರೋಷನ್ ಬೇಗ್ ಗೆ ಸೂಚನೆ ನೀಡಿದೆ.

Key words: IMA –Fraud- Case-  Former minister -Roshan Beg – time – attend