ಐಎಂಎ ಕಂಪನಿ ವಂಚನೆ ಕೇಸ್: ಸಿಬಿಐ, ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿ ವಿಚಾರಣೆ ಮುಂದೂಡಿದ ಹೈಕೋರ್ಟ್…

ಬೆಂಗಳೂರು,ಜೂ,17,2019(www.justkannada.in):  ಹೂಡಿಕೆದಾರರಿಗೆ ಐಎಂಎ ಕಂಪನಿಯಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ, ಸಿಬಿಐಗೆ ಮತ್ತು ಐಎಂಎ ಮಾಲೀಕ ಮನ್ಸೂರ್ ಖಾನ್ ಗೆ ಹೈಕೋರ್ಟ್ ನೋಟೀಸ್ ನೀಡಿ ವಿಚಾರಣೆ ಮುಂದೂಡಿದೆ.

ಐಎಂಎ ಕಂಪನಿಯಿಂದ ಹೂಡಿಕೆದಾರರಿಗೆ ವಂಚನೆ ಮಾಡಿದ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಮನವಿ ಮಾಡಿ ಹೈಕೋರ್ಟ್ 18 ಮಂದಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ಪೀಠ ರಾಜ್ಯ ಸರ್ಕಾರ, ಸಿಬಿಐ ಮತ್ತು ಐಎಂಎ ಮಾಲೀಕ ಮನ್ಸೂರ್ ಖಾನ್ ಗೆ ನೋಟೀಸ್ ಜಾರಿ ಮಾಡಿ ವಿಚಾರಣೆಯನ್ನ ಜೂನ್ 28ಕ್ಕೆ ಮುಂದೂಡಿದೆ.

ಇನ್ನು ಪ್ರಕರಣವನ್ನ ಎಸ್ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಐಎಂಎ ಕಂಪನಿಯ 7 ಮಂದಿ ನಿರ್ದೇಶಕರನ್ನ ಬಂಧಿಸಲಾಗಿದ್ದು, ಕಂಪನಿ ಮಾಲೀಕ ಮನ್ಸೂರ್ ಖಾನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ನಡುವೆ ಇಂದು ಎಸ್ ಐಟಿ ಅಧಿಕಾರಿಗಳು ಶಿವಾಜಿನಗರದ ವೆಂಕಟಪ್ಪ ರಸ್ತೆಯಲ್ಲಿರುವ ಮನ್ಸೂರ್ ಖಾನ್ ನ ಮಾಜಿ ಪತ್ನಿ ಮನೆ ಮೇಲೆ ದಾಳಿ ನಡೆಸಿದ್ದರು.

Key words: IMA- Company -Fraud Case-High Court- postponed- hearing