ನಾನು ಯಾವುದಕ್ಕೂ ಹೆದರಲ್ಲ: ಅಮಾನತು ಮಾಡಿದ್ರೂ ಸಿದ್ಧ- ಶಾಸಕ ತನ್ವೀರ್ ಸೇಠ್….

Promotion

ಮೈಸೂರು,ಫೆಬ್ರವರಿ,27,2021(www.justkannada.in):  ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಜೆಡಿಎಸ್ ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಏಕಪಕ್ಷೀಯ ನಿರ್ಧಾರ ಆರೋಪದ ಮೇಲೆ ಶಾಸಕ ತನ್ವೀರ್ ಸೇಠ್ ಅವರ ಅಮಾನತು ಮಾಡುವಂತೆ ಕಾಂಗ್ರೆಸ್ ನಲ್ಲಿ ಒತ್ತಾಯ ಕೇಳಿ ಬಂದಿದೆ.

ಈ ಬಗ್ಗೆ ಮೈಸೂರುನಲ್ಲಿ ಮಾತನಾಡಿ ಟಾಂಗ್ ನೀಡಿರುವ ಶಾಸಕ ತನ್ವೀರ್ ಸೇಠ್, ನಾನು ಯಾವುದಕ್ಕೂ ಹೆದರಲ್ಲ ಅಮಾನತು ಮಾಡಿದರೂ ನಾನು ಎದುರಿಸಲು ಸಿದ್ಧನಿದ್ದೇನೆ. ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆ ಮಾಡುವುದು ನಡೆಯುತ್ತಿದೆ. ಒಬ್ಬ ವ್ಯಕ್ತಿಯ ಗೌರವ ಅಲ್ಲ. ನಾನು 5 ಬಾರಿ ಗೆದ್ದಿದ್ದೇನೆ. ಒಬ್ಬರ ಗೌರವಕ್ಕಾಗಿ ಎಲ್ಲರ ಗೌರವ ಹರಾಜು ಹಾಕಲು ಆಗಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಿನ್ನೆಯ ಸುದ್ಧಿಗೋಷ್ಠಿ ಗೊಂಬೆಯ ಆಟ: ಗೊಂಬೆ ಆಡಿಸಿದವರ ಬಗ್ಗೆಯೂ ಪಕ್ಷದ ಗಮನಕ್ಕೆ ತರುತ್ತೇನೆ

ನಿನ್ನೆ ಪಾಲಿಕೆ ಕಾಂಗ್ರೆಸ್ ಸದಸ್ಯರ ಸುದ್ಧಿಗೋಷ್ಠಿ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್,  ನಿನ್ನೆಯ ಸುದ್ಧಿಗೋಷ್ಠಿ ಗೊಂಬೆಯ ಆಟ. ಯಾರೋ ಗೊಂಬೆ ಆಟ ಆಡಿಸಿದ್ದಾರೆ.  ಗೊಂಬೆ ಆಡಿಸಿದವರು ಯಾರು ಅಂತಾ ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ. ಗೊಂಬೆ ಆಡಿಸಿದವರ ಬಗ್ಗೆಯೂ ಪಕ್ಷದ ಗಮನಕ್ಕೆ ತರುತ್ತೇನೆ. ನನ್ನ ವಿರುದ್ಧ ಕ್ರಮ ಕೈಗೊಂಡರೇ ಪರಿಣಾಮ ಎದುರಿಸಲು ಸಿದ್ಧರಾಗಬೇಕು ಎಂದರು.I'm not -afraid -Ready – suspend-mysore-MLA- Tanveer Sait.

ಸೋಮವಾರ ಡಿ.ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ ವರದಿ ನೀಡುವೆ. ನನ್ನನ್ನ ರಾಜಕೀಯವಾಗಿ ಮುಗಿಸಲು ನನ್ನ ಜನರು ಬಿಡಲ್ಲ. ನನ್ನನ್ನ ರಾಜಕೀಯವಾಗಿ ಮುಗಿಸಲು ಯಾರಿಂದಲೂ ಆಗಲ್ಲ. ನನ್ನನ್ನ ನೇರವಾಗಿ ಕೆಣಕಿದರೇ ಸುಮ್ಮನಿರಲ್ಲ. ಬೇರೆಯವರ ವರ್ಚಸ್ಸು ನೋಡಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಿದ್ರೆ ಅದನ್ನ ನನ್ನ ಮೇಲೆ ಹಾಕುತ್ತಿದ್ದರು ಎಂದು ಶಾಸಕ ತನ್ವೀರ್ ಸೇಠ್ ಕಿಡಿಕಾರಿದರು.

english summary….

I am not scared of anything: I am ready to face even suspension – MLA Tanveer Sait
Mysuru, Feb. 27, 2021 (www.justkannada.in): Demand to suspend MLA Tanveer Sait is said to be growing as he is facing to have taken a one-sided decision to leave the Mayor’s seat to JDS in the recently held Mysore City Corporation Mayoral election.
Speaking to the press persons today in Mysuru MLA Tanveer Sait said he is not scared of anyone and he is ready to face suspension. “Nowadays individual following is increasing in Congress party. It is not a single persons’ dignity. I have won five times. You can’t auction everybody’s respect for the cause of one person’s dignity,” he said.
In his reply about yesterday’s press meet, he said it was just a puppet show, someone was behind the puppet show. “I will soon expose who was behind that show and I will also bring it to the notice of the party. They should also remember that if they initiate action against me, they should also be ready to face the consequences,” he added.
Keywords: MLA Tanveer Sait/ MCC Mayoral election/ demand for suspensionsiddaramaiah-called-not-received-mla-tanveer-sait

Key words: I’m not -afraid -Ready – suspend-mysore-MLA- Tanveer Sait.