ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ಕರೆತಂದು ಸಿಎಂ ಮಾಡಿವರೆಗೂ ಜೊತೆಗಿದ್ದ ನಮ್ಮತಂದೆಯನ್ನ ಕಡೆಗಣಿಸಿದ್ದು ಎಷ್ಟು ಸರಿ- ಸಿದ್ದರಾಮಯ್ಯ ವಿರುದ್ದ ಎಚ್ ವಿಶ್ವನಾಥ್ ಪುತ್ರ ಅಮಿತ್ ವಾಗ್ದಾಳಿ…

ಮೈಸೂರು,ಮೇ,10,2019(www.justkannada.in):  ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ಕರೆತಂದು ಸಿಎಂ ಮಾಡಿವರೆಗೂ ಜೊತೆಗಿದ್ದ ನಮ್ಮ ತಂದೆಯನ್ನ ಕಡೆಗಣಿಸಿದ್ದು ಎಷ್ಟು ಸರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಎಚ್ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ವಾಗ್ದಾಳಿ ನಡೆಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ರ 71ನೇ ಹುಟ್ಟುಹಬ್ಬ ಹಿನ್ನಲೆ ರಾಮಾನುಜ ರಸ್ತೆಯಲ್ಲಿರುವ ಕಾಮೇಶ್ವರ ಕಾಮೇಶ್ವರಿ ದೇವಾಲಯದಲ್ಲಿ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಸೊಸೆ ಅರ್ಪಿತಾ ಅವರು ವಿಶೇಷ ಪೊಜೆ ಸಲ್ಲಿಸಿದರು. ವಿನೋದ ಪಾಟೀಲ್ ಸ್ನೇಹ ಬಳಗ ಹಾಗೂ ವಿಶ್ವನಾಥ್ ಅಭಿಮಾನಿ ಬಳಗದ ವತಿಯಿಂದ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ನಡುವೆ ಮಾಧ್ಯಮಗಳ ಜತೆ ಮಾತನಾಡಿ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಅಮಿತ್ ದೇವರಹಟ್ಟಿ, ಸಿದ್ದರಾಮಯ್ಯ ಈ ಅವಧಿಯಲ್ಲಿ ಸಿಎಂ ಆಗೋಕೆ ಸಾಧ್ಯನೇ ಇಲ್ಲ. ನಮ್ಮ ತಂದೆ ಮೇಲೆ ಸಿದ್ದರಾಮಯ್ಯಗೆ  ಇನ್ನೂ ಕೂಡಾ ಸಿಟ್ಟು, ಕೋಪವಿದೆ. ಈಗಾಗಿಯೇ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಡೆಗಣಸಿ ದೂರವಿರಿಸಿದ್ದಾರೆ. ಈ ವಯಸ್ಸಿನಲ್ಲೂ ನಮ್ಮ ತಂದೆಯ ಮನಸ್ಸು ನೋಯಿಸಿರುವುದು ನನಗೆ ವೈಯಕ್ತಿಕವಾಗಿ ಬೇಸರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಟಿ ದೇವೇಗೌಡರ ಜೊತೆ ಅವರು ಯಾವ ರೀತಿ ಹೊಂದಿಕೊಂಡರೋ ಆಗೇ ನಮ್ಮ ತಂದೆಯವರ ಜೊತೆನೂ ಹೊಂದಿಕೊಂಡು ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳಬೇಕಿತ್ತು. 36 ಸಾವಿರ ಮತಗಳ ಸೋಲಿಸಿದ ಸಚಿವ ಜಿಟಿಡಿ ಜೊತೆ ವೇದಿಕೆ ಹಂಚಿಕೊಳ್ತಾರೆ. ಆದ್ರೆ ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ಕರೆದುಕೊಂಡು ಬಂದು ಸಿಎಂ ಮಾಡಿವರೆಗೂ ಜೊತೆಗಿದ್ದ ನಮ್ಮ ತಂದೆಯನ್ನ ಕಡೆಗಣಿಸಿದೋ ಎಷ್ಟು ಸರಿ ಎಂದು ಸಿದ್ದರಾಮಯ್ಯಗೆ ಅಮಿತ್  ಪ್ರಶ್ನೆ ಹಾಕಿದರು.

ಹುಣಸೂರಿನ ಜನರು ಕೂಡ ಸಿದ್ದು- ವಿಶ್ವನಾಥ್ ವೇದಿಕೆ ಹಂಚಿಕೊಳ್ತಾರೇ ಅನ್ನೋದನ್ನ ನಿರೀಕ್ಷೆ ಮಾಡಿದ್ದರು.  ಆದ್ರೆ, ಸಿದ್ದರಾಮಯ್ಯ ನವರು ಏಕೆ ವೇದಿಕೆ ಹಂಚಿಕೊಳ್ಳನಿಲ್ಲ. ಆದ್ರೂ ಕೂಡ ಮೈತ್ರಿ ಅಭ್ಯರ್ಥಿ ಸಿ ಎಚ್ ವಿಜಯ್ ಶಂಕರ್ ಪರವಾಗಿ ನಾವು ಕೆಲಸ ಮಾಡಿದ್ದೇವೆ ಎಂದು ಅಮಿತ್ ಹೇಳಿದರು.

Key words: Ignored-  H Viswanath son – Amit devarahatti-against -Siddaramaiah.