ಈದ್ಗಾ ಮೈದಾನ ವಕ್ಫ್ ಬೋರ್ಡ್ ಆಸ್ತಿ: ಸುಪ್ರೀಂಕೋರ್ಟ್ ನಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ.

ನವದೆಹಲಿ,ಆಗಸ್ಟ್,30,2022(www.justkannada.in): ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಸಂಬಂಧ ಹೈಕೋರ್ಟ್ ಆದೇಶ ಪ್ರಶ್ನಿಸಿ ವಕ್ಫ್ ಬೋರ್ಡ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದೆ.

ನ್ಯಾ ಹೇಮಂತ್ ಗುಪ್ತಾ ನೇತೃತ್ವದ  ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು,  ವಕ್ಫ್ ಬೋರ್ಡ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್.  ಈದ್ಗಾ ಮೈದಾನ ವಕ್ಫ್ ಬೋರ್ಡ್ ಆಸ್ತಿಯಾಗಿದೆ ಸರ್ವೆ 40ರ ಜಾಗವನ್ನ ಒಂದು ಸಮುದಾಯ ಬಳಕೆ ಮಾಡುತ್ತಿದೆ. ರಾಷ್ಟ್ರೀಯ ಹಬ್ಬಗಳಿಗೆ ಬಳಸುವಂತೆ ಏಕಸದಸ್ಯ ಪೀಠ ಅನುಮತಿ ನೀಡಿತ್ತು. ಆದ್ರೆ ದ್ವಿಸದಸ್ಯ ಪೀಠ ಬೇರೆ ಆದೇಶ ನೀಡಿದೆ. ಏಕಸದಸ್ಯ ಪೀಠ ಆದೇಶ ನೀಡಿದ ಬಳಿಕ ಅದರ ವಿರುದ್ಧ ದ್ವಿಸದಸ್ಯಪೀಠ ಆದೇಶ ನೀಡಿದೆ.

ಈದ್ಗಾ ಮೈದಾನವನ್ನ ಮಕ್ಕಳ ಆಟದ ಮೈದಾನವಾಗಿ ಬಳಸಲಾಗುತ್ತಿದೆ. ಮೈದಾನವನ್ನ ಮುಸ್ಲಿಂ ಸಮುದಾಯ ಪ್ರಾರ್ಥನೆಗೆ ಬಳಸುತ್ತಿದೆ. ವರ್ಷಕ್ಕೆ ಎರಡು ಹಬ್ಬಗಳ ಆಚರಣೆ ಮಾಡಲಾಗುತ್ತಿದೆ.  ಓಪನ್ ಲ್ಯಾಂಡ್ ಇದೆ ಅಂತ ಬಳಕೆ ಮಾಡಲು ಸಾಧ್ಯವಿಲ್ಲ. ಮೈದಾನ ವಕ್ಫ್ ಆಸ್ತಿ ಎನ್ನುದಕ್ಕೆ ದಾಖಲೆ ಇದೆ.  ಧಾರ್ಮಿಕ ಆಚರಣೆಗೆ ಅವಕಾಶ ಬೇಡ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.

Key words: Idga Maidan -Waqf Board –Property- Kapil Sibal – Supreme Court.