ಮೈಸೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಐಸಿಯು ಬೆಡ್ ನಿರ್ವಹಣೆ

ಮೈಸೂರು ಮೇ 20, 2021 (www.justkannada.in): ದೇಶ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನ ಪ್ರಕರಣಗಳಿಂದಾಗಿ ಐಸಿಯು ಬೆಡ್‌ಗಳ ಬೇಡಿಕೆ ಹೆಚ್ಚಾಗುತ್ತಿದ್ದು ಮೈಸೂರಿನಲ್ಲಿಯೂ ಸಹ ಬೇಡಿಕೆ ಹೆಚ್ಚಾಗಿದೆ.

ಈ ಕ್ಷಣದಲ್ಲಿಯೂ ಮೈಸೂರು ನಗರದಲ್ಲಿಯೇ ಐಸಿಯುಗೆ ವರ್ಗಾಯಿಸಬೇಕಾದ ಅಗತ್ಯವಿರುವ 25 ರೋಗಿಗಳು ಆಮ್ಲಜನಕ ಸಹಿತ ಹಾಸಿಗೆಗಳಲ್ಲಿ ಕಾಯುತ್ತಿದ್ದಾರೆ.
ಈ ವಿಷಯವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರು, ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳ ಸಂಖ್ಯೆ ಕೊರತೆಯಿಲ್ಲದಿದ್ದರೂ ಸಹ ಚಿಕಿತ್ಸೆಗೆ ಅಗತ್ಯವಿರುವ ಇತರೆ ಸಾಧನಗಳು, ತಜ್ಞರು, ವೈದ್ಯರು, ಶುಶ್ರೂಷಕರು ಹಾಗೂ ಗ್ರೂಪ್ ಡಿ ನೌಕರರ ಅಭಾವ ಎದುರಾಗಿದೆ. ಐಸಿಯು ಬೆಡ್‌ಗಳ ನಿರ್ವಹಣೆಗಾಗಿ ಪಿಪಿಪಿ (ಸಾರ್ವಜನಿಕ ಖಾಸಗಿ ಪಾಲುದಾರಿಕೆ) ಮಾದರಿಯನ್ನು ಅಳವಡಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಪ್ರಕಾರ, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ ಐಸಿಯು ಬೆಡ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಗೋಪಾಲಗೌಡ ಆಸ್ಪತ್ರೆಯ ವೈದ್ಯರೊಂದಿಗೆ ಈ ಮಾದರಿಯನ್ನು ನಾಳೆಯಿಂದ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ. ಇದರಿಂದ ಚಿಕಿತ್ಸೆ ನೀಡಲು ಅಗತ್ಯವಿರುವ ವೈದ್ಯರೂ ಸೇರಿದಂತೆ ಸಿಬ್ಬಂದಿಗಳ ಕೊರತೆ ಬಗೆಹರಿಯುವ ವಿಶ್ವಾಸವಿದೆ ಎಂದರು.

“ಮೆರಿಟಾರ್ ಗ್ರೂಪ್‌ನ ಶ್ರೀ ಮುತ್ತುಕುಮಾರ್ ಅವರು ಐಸಿಯು ಬೆಡ್‌ಗಳು, ಬಿಪಾಪ್ಸ್ ಹಾಗೂ ಮಾನಿಟರ್‌ಗಳನ್ನು ಒದಗಿಸಿದ್ದು, ಸದ್ಯಕ್ಕೆ ಅಗತ್ಯ ಸಾಧನಗಳ ಸಮಸ್ಯೆಯೂ ಬಗೆಹರೆದಿದೆ. ನಾಳೆಯಿಂದ ಆರಂಭವಾಗುವAತೆ ಮುಂದಿನ ೧೫ ದಿನಗಳವರೆಗೆ ಈ ಮಾದರಿಯಲ್ಲಿ ನಾವು ಕಾರ್ಯನಿರ್ವಹಿಸಲಿದ್ದು, ಆರಂಭದಲ್ಲಿ ೩೦ ಹಾಸಿಗೆಗಳು ರೋಗಿಗಳಿಗೆ ಲಭ್ಯವಾಗಲಿದ್ದು, ಕ್ರಮೇಣ ಐಸಿಯು ಬೆಡ್‌ಗಳ ಸಂಖ್ಯೆಯನ್ನು ೧೦೦ಕ್ಕೆ ಹೆಚ್ಚಿಸಲಾಗುವುದು. ಇದರಿಂದ ಮೈಸೂರಿನಲ್ಲಿ ಐಸಿಯು ಬೆಡ್‌ಗಳ ಬೇಡಿಕೆ ಕಡಿಮೆಯಾಗುವ ನಿರೀಕ್ಷೆ ಇದೆ.

ಬೆಂಗಳೂರು ಸೇರಿದಂತೆ ನೆರೆಯ ಇತರೆ ಜಿಲ್ಲೆಗಳ ಜನರೂ ಸಹ ವೆಂಟಿಲೇಟರ್‌ಗಳನ್ನು ಹುಡುಕಿಕೊಂಡು ಮೈಸೂರಿಗೆ ಬರುತ್ತಿದ್ದು, ಇದೊಂದು ನಿರಂತರ ಹೋರಾಟದಂತಾಗಿದೆ. ಈ ಪ್ರಕಾರವಾಗಿ ಪ್ರಸ್ತುತ ಮೈಸೂರಿನಲ್ಲಿ ೧೫೦ ಸರ್ಕಾರಿ ಹಾಗೂ ೧೦ ಖಾಸಗಿ ಬೆಡ್‌ಗಳೂ ಒಳಗೊಂಡಂತೆ ಲಭ್ಯವಿರುವ ಒಟ್ಟು ಐಸಿಯು ಬೆಡ್‌ಗಳ ಸಂಖ್ಯೆ ೩೦೦ ಆಗಿದೆ,” ಎಂದು ಮಾಹಿತಿ ನೀಡಿದರು

ICU bed management in PPP model .

In Mysuru, there has been a persistent need to increase ICU beds as the demand for the same has been there.

Even now there is a waiting of 25 patients in oxygen beds to shift to ICU, though there is no shortage of oxygen beds.

The challenges have been manpower(specialists, doctors, nurses ,group d) and equipment

We are trying out this model in Mysuru from tomorrow wherein doctors from Gopal Gowda hospital have collaborated with the super speciality hospital to monitor the ICU care. This solves our manpower issue

Meritor group Mr. Muthukumar has supplied the ICU beds, bipaps and monitors. This solves our equipment issue

We have been working on this for the past 15 days and from tomorrow there will be 30 beds available and gradually be increased upto 100 ICU beds.

Hope this will ease the demand for ICU beds in Mysuru

However since people from neighbouring districts and Bangalore too come to Mysuru in search for ventilators this has been a constant struggle.