ಕ್ರಾಸ್ ಬ್ರೀಡಿಂಗ್ ವಿಚಾರ ನನಗೆ ಬೇಡ: ಅದು ದೊಡ್ಡವರಿಗೆ ಸಂಬಂಧಪಟ್ಟಿದ್ದು- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಮೈಸೂರು,ಡಿಸೆಂಬರ್,2,,2020(www.justkannada.in): ಲವ್ ಜಿಹಾದ್ ವಿರುದ್ಧ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಚಿಂತನೆ  ನಡೆಸತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಲವ್ ಜಿಹಾದ್‌ ಗಿಂತಲೂ ಮುಖ್ಯವಾದ ಹಲವಾರು ಸಮಸ್ಯೆಗಳು ರಾಜ್ಯದಲ್ಲಿವೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಲಿ ಎಂದು ಸಲಹೆ ನೀಡಿದ್ದಾರೆ.logo-justkannada-mysore

ಲವ್ ಜಿಹಾದ್ ಕಾಯ್ದೆ ಬಗ್ಗೆ  ಮಾತನಾಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಲವ್ ಜಿಹಾದ್ ಕಾಯ್ದೆ ಜಾರಿಗೆ ಮುಂದಾಗಿರುವುದು ಮೂರ್ಖತನ. ಮುಸ್ಲೀಂರು 600 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಹೀಗಾಗಿ ಹಿಂದೂ ಮುಸ್ಲೀಂ ಕ್ರಾಸ್ ಆಗಿ ಹುಟ್ಟಿದವರು ಸಾಕಷ್ಟು ಇದ್ದಾರೆ ಎಂದಿದ್ದರು. ಇದಕ್ಕೆ ಕಿಡಿಕಾರಿದ್ಧ ಸಚಿವ ಕೆ.ಎಸ್ ಈಶ್ವರಪ್ಪ ಕಾಂಗ್ರೆಸ್ ನವರದ್ದು ಕ್ರಾಸ್ ಬ್ರೀಡ್ ಸಂತತಿ. ಸಿದ್ದರಾಮಯ್ಯಗೆ ಕ್ರಾಸ್ ಬ್ರೀಡ್ ಮೇಲೆ ಆಸಕ್ತಿ ಎಂದು ವಾಗ್ದಾಳಿ ನಡೆಸಿದ್ದರು.

ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕ್ರಾಸ್ ಬ್ರೀಡಿಂಗ್ ವಿಚಾರ ನನಗೆ ಬೇಡ. ಅದು ದೊಡ್ಡವರಿಗೆ ಸಂಬಂಧಪಟ್ಟ ವಿಚಾರ‌‌ ಎಂದು ಟಾಂಗ್ ನೀಡಿದ್ದಾರೆ.

ಬಿಜೆಪಿಯವರ ಗ್ರಾಮ ಸ್ವರಾಜ್ ಕಾರ್ಯಕ್ರಮ ವರ್ಕೌಟ್ ಆಗಲ್ಲ.

ಗ್ರಾ.ಪಂ ಚುನಾವಣೆ ಪಕ್ಷಗಳ ಚಿಹ್ನೆ ಆಧಾರದ ಮೇಲೆ ನಡೆಯಲ್ಲ. ಹೀಗಾಗಿ ಬಿಜೆಪಿಯವರ ಗ್ರಾಮ ಸ್ವರಾಜ್ ಕಾರ್ಯಕ್ರಮ ವರ್ಕೌಟ್ ಆಗಲ್ಲ. ಗ್ರಾ.ಪಂ ಚುನಾವಣೆಯಲ್ಲಿ ಯಾವುದೇ ಪಕ್ಷ ಇರಲ್ಲ. ಒಂದೇ ಪಕ್ಷದ ಇಬ್ಬರು, ಮೂವರು ಸ್ಪರ್ಧೆ ಮಾಡಬಹುದು. ಒಂದೇ ಕುಟುಂಬದ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾಗಿರುವುದನ್ನು ನೋಡಿದ್ದೇವೆ. ಸ್ಥಳೀಯ ವಿಚಾರದ ಆಧಾರದ ಮೇಲೆ ಗ್ರಾ.ಪಂ ಚುನಾವಣೆ ನಡೆಯುತ್ತೆ‌. ಆದ್ದರಿಂದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ ನಮ್ಮನ್ನ ಬಿಟ್ಟು ಎಲ್ಲಿ ಹೋಗಿದ್ದಾರೆ.

ಶಾಸಕ ಜಿ.ಟಿ ದೇವೇಗೌಡರ ಬಗ್ಗೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಶಾಸಕ ಜಿ.ಟಿ.ದೇವೇಗೌಡ ನಮ್ಮನ್ನ ಬಿಟ್ಟು ಎಲ್ಲಿ ಹೋಗಿದ್ದಾರೆ. ಅವರು ಇನ್ನೂ ಜೆಡಿಎಸ್ ನಲ್ಲಿಯೇ ಇದ್ದಾರೆ. ಅವರೇ ಮೊನ್ನೆ ಜೆಡಿಎಸ್ ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಸರ್ಕಾರ ಕಾರ್ಯಕ್ರಮಗಳಲ್ಲಿ ಬಿಜೆಪಿಯವರ ವೇದಿಕೆ ಹಂಚಿಕೊಳ್ಳುವುದು ಸಾಮಾನ್ಯ. ಇದಕ್ಕೆ ಬೇರೆ ರೀತಿಯ ಅರ್ಥಗಳನ್ನು ಕಲ್ಪಿಸಿಕೊಳ್ಳುವುದು ಬೇಡ ಎಂದು ಸ್ಪಷ್ಟನೆ ನೀಡಿದರು.i-dont-talk-cross-breeding-former-cm-hd-kumaraswamy-mysore

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರ ಮುಂದಾಳತ್ವದಲ್ಲೇ ಗ್ರಾ.ಪ‌ಂ ಚುನಾವಣೆ ನಡೆಯಲಿದೆ. ಅವರು ಶಾಸಕರಾಗಿರುವಷ್ಟು ದಿನದವರೆಗೂ ನಮ್ಮ ಪಕ್ಷವನ್ನೇ ಬೆಂಬಲಿಸಬೇಕು ಎಂದರು.

english summary…

Former CM HDK refuses to comment over ‘crossbreed’ remark
Mysuru, Dec. 2, 2020 (www.justkannada.in): Reacting to the State Government’s decision to introduce a law against love jihad, former CM H.D. Kumaraswamy said that there are more important problems than those in the State, and the government should focus on those problems.
Former Chief Minister Siddaramaiah in his response to the State Govt.’s proposal to introduce a law against love jihad had mentioned it as a stupid move. He had said that Muslims had ruled over our country for nearly 600 years and there were many people who have born as Hindu-Muslim crossbreeds. Reacting to this BJP leader K.S. Eshwarappa had mentioned that Congress is also a crossbreed and hence, Siddaramaiah was interested in crossbreeds.i-dont-talk-cross-breeding-former-cm-hd-kumaraswamy-mysore
In his response to this issue, former CM H.D.Kumaraswamy sarcastically said that he was not interested in that matter as it is related to big leaders.
Keywords: HD/Siddaramaiah/ love jihar/ law

Key words: I don’t –talk- cross breeding-  Former CM -HD Kumaraswamy-mysore