ಹೈಕಮಾಂಡ್ ಯಾರನ್ನೇ ಸಿಎಂ ಮಾಡಿದ್ರೂ ನನ್ನ ವಿರೋಧ ಇಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಅಕ್ಟೋಬರ್,19,2021(www.justkannada.in):  ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ. ಹೈಕಮಾಂಡ್ ಯಾರನ್ನೇ ಸಿಎಂ ಮಾಡಿದರೂ ನನ್ನ ವಿರೋಧ ಇಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ನುಡಿದಿದ್ದಾರೆ.

ಸಿಎಂ ಇಬ್ರಾಹಿಂಗೆ ಟಾಂಗ್ ನೀಡಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಚುನಾವಣೆಗೂ ಮುನ್ನ ಸಿಎಂ ಘೋಷಣೆ ಮಾಡಲ್ಲ ಈ ಸಂಸ್ಕೃತಿ ಕಾಂಗ್ರೆಸ್ ನಲ್ಲಿ ಇಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಸಿಎಂ ಯಾರಾಗಬೇಕೆಂದು ಹೈಕಮಾಂಢ್ ಸೂಚಿಸುತ್ತೇ. ಹೈಕಮಾಂಡ್ ಯಾರನ್ನೂ ಸಿಎಂ ಮಾಡಿದ್ರೂ ನನ್ನ ವಿರೋಧವಿಲ್ಲ.  ದಲಿತರನ್ನಾದ್ರೂ ಸಿಎಂ ಮಾಡಲಿ. ಮುಸ್ಲೀಂರನ್ನಾದ್ರೂ ಸಿಎಂ ಮಾಡಿದ್ರೆ ನನ್ನ ವಿರೋಧ ಇಲ್ಲ. ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಆರ್ ಎಸ್ ಎಸ್ ನಲ್ಲಿ ಇದ್ರಾ. ಬೊಮ್ಮಾಯಿ ಮೂಲ ಆರ್ ಎಸ್ ಎಸ್ ಏನ್ರಿ…? ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ  ಈ  ಹಿಂದೆ  ಬೊಮ್ಮಾಯಿ ನಮ್ಮ ಜೊತೆಯಲ್ಲೇ ಇದ್ದರು. ಇತ್ತೀಚೆಗೆ ಬಿಜೆಪಿಗೆ ಹೋದರು. ಈಗ ಆರ್ ಎಸ್ ಎಸ್ ಹೊಗಳುತಿದ್ದಾರೆ.. ನಾನು 1 ಕುಟುಂಬದ ಹಿಡಿತದಲ್ಲಿರಲು ಸಾಧ್ಯವಿಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.

Key words: I am not -opposed – CM – High Command-Former CM -Siddaramaiah.