ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ ಮೇಲೆ ಹಲ್ಲೆಗೆ ಪ್ರಚೋದನೆ ಆರೋಪ : ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ಆ,15,2020(www.justkannada.in): ನನ್ನ ಮೇಲೆ ಹಲ್ಲೆ ನಡೆಸಲು ಹೆಚ್.ವಿಶ್ವನಾಥ್ ಪುತ್ರ ಪ್ರಚೋದನೆ ನೀಡಿದ್ದಾರೆ ಎಂಬ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ ಆರೋಪ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎಸ್.ಟಿ ಸೋಮಶೇಖರ್ ಈ ಬಗ್ಗೆ ತನಿಖೆ ನಡೆಸುವಂತೆ ಎಸ್ಪಿಯವರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಲೋಕಲ್‌ ನವರು ಮೊಬೈಲ್‌‌ನಲ್ಲಿ ಮಾತನಾಡಿಕೊಂಡಿದ್ದಾರೆ. ನಿನ್ನೆ ಮೀಟಿಂಗ್‌ನಲ್ಲಿ ಶಾಸಕ ಮಂಜುನಾಥ್ ಈ ವಿಚಾರ ಪ್ರಸ್ತಾಪ ಮಾಡಿದರು. ಹೀಗಾಗಿ ಈ ಬಗ್ಗೆ ಕೂಡಲೇ ತನಿಖೆ‌ ನಡೆಸಲು ಎಸ್ಪಿ ಅವರಿಗೆ  ಸೂಚನೆ ನೀಡಿದ್ದೇನೆ. ಮೊಬೈಲ್ ಟು ಮೊಬೈಲ್ ಇಬ್ಬರ ನಡುವೆ ಸಂಭಾಷಣೆ ನಡೆದಿದೆ. ಎಸ್ಪಿ‌ಯವರು ತನಿಖೆ  ಮಾಡಲಿದ್ದು, ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ಸಾಬೀತಾದ ಬಳಿಕ ಕ್ರಮ ಕೈಗೊಳ್ತಾರೆ ಎಂದು ತಿಳಿಸಿದರು.Hunsur –MLA- HP Manjunath – assault-case-Minister -ST Somashekhar

ರಾಜ್ಯದಲ್ಲಿ ಎಸ್‌ಡಿ‌‌ಪಿಐ ನಿಷೇಧಕ್ಕೆ ಚಿಂತನೆ‌ ವಿಚಾರ: ಕ್ಯಾಬಿನೆ‌ಟ್‌ ನಲ್ಲಿ ಪ್ರಸ್ತಾಪ  

ರಾಜ್ಯದಲ್ಲಿ ಎಸ್‌ಡಿ‌‌ಪಿಐ ನಿಷೇಧಕ್ಕೆ ಚಿಂತನೆ‌ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ರಾಜ್ಯಾದ್ಯಂತ ಈ ವಿಚಾರ ಚರ್ಚೆ ನಡೆಯುತ್ತಿದೆ, ಕ್ಯಾಬಿನೆ‌ಟ್‌ ನಲ್ಲಿ ವಿಚಾರ ಪ್ರಸ್ತಾಪ  ಮಾಡುತ್ತೇವೆ. ಕಾಂಗ್ರೆಸ್‌ ಹಿರಿಯ ಶಾಸಕ ರಾಮಲಿಂಗಾರೆಡ್ಡಿಯವರೇ ಎಸ್‌ಡಿ‌ಪಿ‌ಐ ಬ್ಯಾನ್‌ ಮಾಡಿ. ಇದರಿಂದ ಕಾಂಗ್ರೆಸ್‌ ಗೆ ಏಟು ಜಾಸ್ತಿ ಅಂತ ಹೇಳಿದ್ದಾರೆ. ಹೀಗಾಗಿ ಅದನ್ನು ಬ್ಯಾನ್ ಮಾಡಲು ತೀರ್ಮಾನ ಮಾಡುತ್ತೇವೆ. ಬ್ಯಾನ್‌ ಮಾಡುವುದು ಒಂದು ಕಡೆ ಆದರೆ, ಗಲಭೆಕೋರರಿಂದಲೇ ನಷ್ಟ ಭರಿಸಲು ಗೃಹ ಸಚಿವರು ಸೂಚನೆ ನೀಡಿದ್ದಾರೆ ಎಂದರು.

Key words: Hunsur –MLA- HP Manjunath – assault-case-Minister -ST Somashekhar