ಹುಣಸೂರು ಉಪಚುನಾವಣೆಗೆ ಸಕಲ‌ ಸಿದ್ಧತೆ: ಸಮಯಕ್ಕೆ  ಸರಿಯಾಗಿ ಬಾರದ ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡ ಚುನಾವಣಾಧಿಕಾರಿ ಪೂವಿತಾ….

kannada t-shirts

ಮೈಸೂರು,ಡಿ,4,2019(www.justkannada.in):  15 ಕ್ಷೇತ್ರಗಳ ಉಪಚುಣಾವಣೆ ಮತದಾನಕ್ಕೆ ಇನ್ನು ಒಂದೇ ದಿನ ಬಾಕಿ ಇದ್ದು, ಹುಣಸೂರು ಕ್ಷೇತ್ರದಲ್ಲಿ ಸಕಲ‌ ಸಿದ್ಧತೆ ಮಾಡಲಾಗಿದೆ. ಈ ನಡುವೆ  ಸಮಯಕ್ಕೆ ಸರಿಯಾಗಿ ಹಾಜರಾಗದ ಅಧಿಕಾರಿಗಳಿಗೆ ಚುನಾವಣಾಧಿಕಾರಿ‌  ಪೂವಿತಾ ಅವರು ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಹುಣಸೂರು ಕ್ಷೇತ್ರದ  ಮಸ್ಟರಿಂಗ್ ಕಾರ್ಯ ನಡೆಯುತ್ತಿದ್ದು, ಸಮಯಕ್ಕೆ ಸರಿಯಾಗಿ ಆಗಮಿಸದ ಸಿಬ್ಬಂದಿಗಳ ವಿರುದ್ದ ಚುನಾವಣಾಧಿಕಾರಿ ಪೂವಿತಾ ಗರಂ ಆಗಿದ್ದರು.  ಸಮಯಕ್ಕೆ ಸರಿಯಾಗಿ ಬಾರದ ಅಧಿಕಾರಿಗಳು ಪರ್ಮನೆಂಟಾಗಿ ಮನೆಯಲ್ಲೇ ಇರಲು ಹೇಳಿ. ಕಾಮನ್ ಸೆನ್ಸ್ ಇಲ್ವಾ ಇವ್ರಿಗೆ. ಸಮಯಕ್ಕೆ ಸರಿಯಾಗಿ ಬರಕ್ಕಾಗದಿದ್ದಲ್ಲಿ ಮನೆಲಿರೊದಕ್ಕೆ ಹೇಳಿ, ಸಸ್ಪೆನ್ಷನ್ ಅರ್ಡರ್ ಕಳಿಸ್ತೀವಿ ಎಂದು ಕಿಡಿಕಾರಿದರು.

ನಾಳೆ ಹುಣಸೂರು ಸೇರಿದಂತೆ 15 ಕ್ಷೇತ್ರಗಳಿಗೆ ಉಪಚುನಾವಣಾ ಮತದಾನ ನಡೆಯಲಿದ್ದು ಸಕಲ ಸಿದ್ಧತೆ ಮಾಡಲಾಗಿದೆ. ಡಿಸೆಂಬರ್ 9 ರಂದು ಫಲಿತಾಂಶ ಹೊರ ಬೀಳಲಿದೆ.

Key words: Hunsur- by-election  election officer – Poovita –charge-staff

website developers in mysore