ಈ ಬಾರಿ ನನ್ನ ಗೆಲುವು ನಿಶ್ಚಿತ: ರಾಜೀನಾಮೆ ನೀಡಿದ್ದಕ್ಕೆ ತಕ್ಕನಾಗಿ ಕ್ಷೇತ್ರಕ್ಕೆ ಅನುದಾನವನ್ನಾದ್ರು ತಂದ್ರಾ?-ಹೆಚ್.ವಿಶ್ವನಾಥ್ ಗೆ ಟಾಂಗ್ ಕೊಟ್ಟ ಕೈ ಅಭ್ಯರ್ಥಿ ಮಂಜುನಾಥ್….

Promotion

ಹುಣಸೂರು,ನ,13,2019(www.justkannada.in):  ಹುಣಸೂರು ಶಾಸಕರು ಕ್ಷೇತ್ರವನ್ನ ಒಂದೂವರೆ ವರ್ಷದಿಂದ ಅನಾಥ ಮಾಡಿದ್ರು. ಅವರು ರಾಜೀನಾಮೆ ನೀಡಿದ್ದಕ್ಕೆ  ತಕ್ಕನಾಗಿ ಕ್ಷೇತ್ರಕ್ಕೆ ಅನುದಾವನ್ನಾದ್ರು ತಂದ್ರಾ? ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಗೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಟಾಂಗ್ ನೀಡಿದರು.

ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಪಿ ಮಂಜುನಾಥ್, ಅನರ್ಹರು ಮಂತ್ರಿಯಾಗಿ ಚುನಾವಣೆ ಎದುರಿಸುವ ಆಸೆ ಹೊಂದಿದ್ರು. ಅವರ ಆಲೋಚನೆಗೆ ಸುಪ್ರೀಂಕೋರ್ಟ್ ತಣ್ಣಿರು ಎರಚಿದೆ. ಈಗ ಅವರೇಲ್ಲ ಜನತಾ ನ್ಯಾಯಾಲಯದಲ್ಲಿ ತೀರ್ಪು ಪಡೆಯಬೇಕಿದೆ. ಇದೊಂದು ಅನೈತಿಕ‌ ಚುನಾವಣೆ. ಈ ಉಪಚುನಾವಣೆ ಬೇಕಾಗಿರಲಿಲ್ಲ. ಆದ್ರೆ ಅನರ್ಹರು ದುರುದ್ದೇಶದಿಂದ ರಾಜೀನಾಮೆ ನೀಡಿದ್ರು. ಯಾವುದೇ ಉದ್ದೇಶವಿಲ್ಲದೆ ಸ್ವಹಿತಕ್ಕಾಗಿ ರಾಜೀನಾಮೆ ನೀಡಿದವರ ಬಗ್ಗೆ ಜನ ತೀರ್ಮಾನ ಮಾಡ್ತಾರೆ. ಹುಣಸೂರು ತಾಲ್ಲೂಕಿನ ಪ್ರತಿ ಮನೆಯಲ್ಲು ಅನರ್ಹ ಶಾಸಕರ ಬಗ್ಗೆ ಅಸಮಾಧಾನ ಇದೆ. ಸುಪ್ರೀಂಕೋರ್ಟ್ ಸಹ ನೀವು ಮಾಡಿದ್ದು ಸರಿನಾ ಅಂತ ಜನರನ್ನೆ ಕೇಳಿ ಎಂದು ತೀರ್ಪು ನೀಡಿದೆ. ಈ ಚುನಾವಣಾ ತಾಲ್ಲೂಕಿನ ಚುನಾವಣೆಯಾಗಲಿದೆ ಎಂದು ತಿಳಿಸಿದರು.

ನವೆಂಬರ್ 15ರಿಂದ ಹುಣಸೂರು ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿವಿ. ಪ್ರಚಾರಕ್ಕೆ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್.ಪರಮೇಶ್ವರ್ ಎಲ್ಲ ನಾಯಕರು ಬರ್ತಾರೆ. ಈ ಬಾರಿ ನನ್ನ ಗೆಲುವು ನಿಶ್ಚಿತ. ಈ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಹೆಚ್.ಪಿ ಮಂಜುನಾಥ್ ತಿಳಿಸಿದರು.

ನನ್ನ ಸಣ್ಣಪುಟ್ಟ ತಪ್ಪುಗಳನ್ನ ತಿದ್ದುಕೊಂಡಿದ್ದೇನೆ. ಕೋಪ ಬಿಟ್ಟು ಸಾಕಷ್ಟು ತಾಳ್ಮೆ ಕಲಿತಿದ್ದೇನೆ. ಕಳೆದ ಬಾರಿ ನನ್ನ ಕೋಪವನ್ನೇ ಲಾಭ ಕೆಲವರು ಮಾಡಿಕೊಂಡ್ರು. ಸುಮ್ಮನೇ ನನ್ನ ವಿಡಿಯೋಗಳನ್ನ ಹರಿ ಬಿಟ್ಟಿದ್ರು. ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕೆಟ್ಟದಾಗಿ ಬಿಂಬಿಸಿದ್ರು. ಆದ್ರೆ ಈ ಬಾರಿ ನನ್ನ ಗೆಲುವು ಹುಣಸೂರಿನ ಗೆಲುವಾಗಲಿದೆ. ಮನೆಯ ಮಗನ ರೀತಿ ಎಲ್ಲರು ನನಗೆ ಸಹಕಾರ ನೀಡ್ತಿದ್ದಾರೆ. ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದು ಹೆಚ್.ಪಿ ಮಂಜುನಾಥ್ ತಿಳಿಸಿದರು.

Key words: hunsur-by-election-congress-candidate-HP Manjunath-outrage-bjp