‘ಕರ್ನಾಟಕದಲ್ಲಿನ ಉದ್ಯೋಗ ಕನ್ನಡಿಗರಿಗೆ’: ಜಾಗೃತಿಗಾಗಿ ಇಂದು ಬೆಂಗಳೂರಿನಲ್ಲಿ ಮಾನವ ಸರಪಳಿ ರಚನೆ

ಬೆಂಗಳೂರು,ಮೇ,18,2019(www.justkannada.in): ಇತ್ತೀಚೆಗೆ ಆರಂಭವಾಗಿರುವ ಕರ್ನಾಟಕದಲ್ಲಿನ ಉದ್ಯೋಗ ಕನ್ನಡಿಗರಿಗೇ ಸಿಗಬೇಕು , #KarnatakaJobsForKannadigas ಟ್ವಿಟರ್ ಅಭಿಯಾನಕ್ಕೆ ರಾಜ್ಯದೆಲ್ಲೆಡೆ ಜಾಗೃತಿ ಮೂಡಿಸಲು ಇಂದು ಬೆಂಗಳೂರಿನಲ್ಲಿ ಮಾನವಸರಪಳಿ ರಚನೆಯನ್ನ ಆಯೋಜಿಸಲಾಗಿದೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ  ಬೆಳಿಗ್ಗೆ 11ಗಂಟೆಗೆ ಕರನಾಡ ಸೇವಕರು  ಮತ್ತು ಕರ್ನಾಟಕ ರಣಧೀರ ಪಡೆ ಈ ಮಾನವಸರಪಳಿ ರಚನೆ ಕಾರ್ಯಕ್ರಮ ನಡೆಯಲಿದೆ. ಈ ಮಾನವಸರಪಳಿ ರಚನೆಯಲ್ಲಿ  ಎಲ್ಲರೂ ಪಾಲ್ಗೊಳ್ಳುವಂತೆ  ಸದಸ್ಯರು ಮನವಿ ಮಾಡಡಿದ್ದಾರೆ.

ಈ ಕುರಿತು ಮಾತನಾಡಿರುವ ರಮಾನಂದ ಅಂಕೋಲಾ,  ಇದು ಯಾರ ವಿರುದ್ಧದ ಪ್ರತಿಭಟನೆ ಅಲ್ಲ. ಕರ್ನಾಟಕದಲ್ಲಿನ ಉದ್ಯೋಗ ಕನ್ನಡಿಗರಿಗೇ ಸಿಗಬೇಕು ಎಂಬ ಪ್ರಜ್ಞೆಯನ್ನು ನಿರಂತರವಾಗಿ ಜಾಗೃತಿಯಲ್ಲಿಡುವ ಒಂದು ಕಾರ್ಯಕ್ರಮ ಅಷ್ಟೇ. ಇಂತಹ ಜಾಗೃತಿಯ ಅಗತ್ಯ ಯಾಕಿದೆ ಅಂದರೆ, ಇದೇ ತಿಂಗಳ ೩ರಂದು #KarnatakaJobsForKannadigas ಟ್ವಿಟರ್ ಅಭಿಯಾನಕ್ಕೆ ಬೆಂಬಲ‌ ಸೂಚಿಸುತ್ತಾ ನಮ್ಮ ಮುಖ್ಯಮಂತ್ರಿಯವರು “ಕನ್ನಡಿಗರ ಹಕ್ಕೊತ್ತಾಯ ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಕಾರ್ಯರೂಪಕ್ಕೆ ತರಬಹುದು ಎಂದು ಸಲಹೆ ಪಡೆಯಲಾಗುವುದು” ಎಂದು ಹೇಳಿದ್ದರು.

ಸದ್ಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಕ್ರಿಯಾತ್ಮಕವಾಗಿ ಏನಾದರೂ ಮಾಡಲು ಅವರಿಗೆ ಮೇ೨೩ರ ನಂತರವೂ ಒಂದೆರಡು ವಾರ ಸಮಯ ನೀಡಬಹುದು. ಆಗಲೂ ಸಹ ತಾವು ಕೊಟ್ಟ ಭರವಸೆಯನ್ನು ಈಡೇರಿಸಲು ಅವರು ಮುಂದಾಗದಿದ್ದರೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ.  ಅಂತಹ ಪರಿಸ್ಥಿತಿ ಎದುರಾದರೆ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ರೂಪಿಸಲು ನಿರಂತರವಾದ ಜನಜಾಗೃತಿಯೊಂದರ ಅಗತ್ಯ ಇರುತ್ತದೆ. ಇಂತಹ ಒಂದು ಜಾಗೃತಿಯೇ ಕರ್ನಾಟಕದಲ್ಲಿನ ಉದ್ಯೋಗ ಕನ್ನಡಿಗರಿಗೇ ಮೀಸಲಾಗಲಿ ಎಂದು ಕೇಳುವ  “ಮಾನವ ಸರಪಳಿ ರಚನೆ”. ಬೆಳಿಗ್ಗೆ ೧೧ಗಂಟೆಗೆ ನಡೆಯುವ ಮಾನವಸರಪಳಿ ರಚನೆಯಲ್ಲಿ  ನಮ್ಮ ಜೊತೆಯಾಗಿ.ಉದ್ಯೋಗದ ಪ್ರಶ್ನೆ ಬಹುಮುಖ್ಯವಾದುದು ದಯಮಾಡಿ ಸಮಯ ಮೀಸಲಿಟ್ಟುಕೊಂಡು ಭಾಗವಹಿಸಿ ಎಂದು ರಮಾನಂದ ಅಂಕೋಲಾ ಹಾಗೂ ಕರ್ನಾಟಕ ರಣಧೀರ ಪಡೆ ಸದಸ್ಯರು ಮನವಿ ಮಾಡಿದ್ದಾರೆ.

Key words: Human chain formation in Bangalore for awareness #KarnatakaJobsForKannadigas Campaign.

#karnataka #job #Human chain #bangalore