ಮೈಸೂರಿನಲ್ಲಿ ಆಟೋ ಮೇಲೆ ಬಿದ್ದ ಭಾರಿ ಗಾತ್ರದ ಮರ…

kannada t-shirts

ಮೈಸೂರು,ಆ,22,2020(www.justkannada.in):   ಮೈಸೂರಿನ ಆರ್ಟಿಓ ಸರ್ಕಲ್ ಬಳಿ ಆಟೋ ಮೇಲೆ ಭಾರೀ ಗಾತ್ರದ ಮರ ಬಿದ್ದು ಆಟೋ ಜಖಂಗೊಂಡ ಘಟನೆ ನಡೆದಿದೆ.huge-tree-fell-auto-mysore

ಚಲಿಸುತ್ತಿದ್ದ ಆಟೋ ಮೇಲೆ ಏಕಾಏಕಿ ಮರ ಬಿದ್ದಿದ್ದು ಆಟೋಚಾಲಕ ಕೊದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಆಟೋ ಜಖಂ ಆಗಿದೆ. ಮರ ಟೊಳ್ಳಾಗಿದ್ದ ಹಿನ್ನೆಲೆಯಲ್ಲಿ ಮರ ಬಿದ್ದಿದೆ. ಆರ್ಟಿಓ ವೃತ್ತ ಜನನಿಬಿಡ ಸ್ಥಳವಾಗಿದ್ದು ಇಂದು ಗಣೇಶ ಹಬ್ಬವಿದ್ದ ಕಾರಣ ಜನಸಂಚಾರ ಹಾಗೂ ವಾಹನಸಂಚಾರ ವಿರಳವಾಗಿತ್ತು.huge-tree-fell-auto-mysore

ಎಂದಿನ ದಿನಗಳಲ್ಲಿ ಅವಘಡ ಸಂಭವಿಸಿದ್ದರೆ ಹೆಚ್ಚಿನ ಪ್ರಾಣಹಾನಿಯಾಗುವ ಸಾಧ್ಯತೆ ಇತ್ತು . ಘಟನೆಯಲ್ಲಿ ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

Key words:  huge tree- fell – auto – Mysore.

website developers in mysore