ಸಿಗರೇಟ್ ಸೇದಿ, ಲಿಪ್ ಲಾಕ್ ಮಾಡಿದ ರಚಿತಾಗೆ ಕ್ಲಾಸ್ ತೆಗೆದುಕೊಂಡ ಹುಚ್ಚ ವೆಂಕಟ್ !

kannada t-shirts

ಬೆಂಗಳೂರು, ಫೆಬ್ರವರಿ 24, 2020 (www.justkannada.in): ನಟ ಹುಚ್ಚ ವೆಂಕಟ್ ನಟಿ ರಚಿತಾ ರಾಮ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ !

ಹೌದು. ಹುಚ್ಚ ವೆಂಕಟ್​​ ಮತ್ತೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಈ ಬಾರಿ ರಚಿತಾ ರಾಮ್​ಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪ್ರೇಮ್​ ನಿರ್ದೇಶನದ ಏಕ್​​ ಲವ್​ ಯಾ ಸಿನಿಮಾ ಟೀಸರ್​ನಲ್ಲಿ ರಚಿತಾ ರಾಮ್​​ ಲಿಪ್​ ಕಿಸ್​ ಮಾಡಿ ಸಿಗರೇಟ್​ ಸೇದಿದ್ದಾರೆ.

ಇದನ್ನು ವಿರೋಧಿಸಿರುವ ಹುಚ್ಚ ವೆಂಕಟ್​​ ರಚಿತಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಯೂಟ್ಯೂಬ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ವೆಂಕಟ್​​, ಈ ವಿಡಿಯೋ ರಚಿತಾ ರಾಮ್​​ಗೆ ಎಂದು ಹೇಳುತ್ತ, ಯಾಕ್ರೀ ಈ ರೀತಿಯ ಪಾತ್ರಗಳನ್ನ ಮಾಡಿ ಜನರನ್ನ ಹಾಳ್​ ಮಾಡ್ತೀರಾ.. ನೀವು ಸಿಗರೇಟ್​ ಸೇದಿದ್ದೀರಾ..

ಲಿಪ್​ ಕಿಸ್​​ ಮಾಡಿದ್ದೀರಾ? ಇದ್ರಿಂದ ಏನಾಗುತ್ತೆ?. ಥಿಯೇಟರ್​ನಲ್ಲಿ ಹೆಣ್ಣು ಮಕ್ಕಳು ಕೂತು ಸಿನಿಮಾ ನೋಡೋಕೆ ಮುಜುಗರ ಆಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

website developers in mysore