ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಬಿಸಿ..? ಶರತ್ ಬಚ್ಚೇಗೌಡ ಸ್ಪರ್ಧೆ ಖಚಿತ….

ಬೆಂಗಳೂರು,ನ,2,2019(www.justkannada.in): ಡಿಸೆಂಬರ್ 5 ರಂದು 15 ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು  ಬೈ ಎಲೆಕ್ಷನ್ ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಈ ನಡುವೆ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.

ಹೌದು ಬಿಜೆಪಿಯಿಂದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಟಿಕೆಟ್ ನೀಡಲು ಮುಂದಾಗಿದ್ದು ಹೀಗಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಶರತ್ ಬಚ್ಚೇಗೌಡ ಬಂಡಾಯವೆದ್ದಿದ್ದಾರೆ. ಹೊಸಕೋಟೆಯಲ್ಲಿ ನಾನೇ ಅಭ್ಯರ್ಥಿ . ಒಂದು ವೇಳೆ ಟಿಕೆಟ್ ಸಿಗದಿದ್ದರೆ ಬೇರೆ ಚಿಹ್ನೆ ಬರಬಹುದು ಎಂದು ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿರುವ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡರ ಶರತ್ ಬಚ್ಚೇಗೌಡ, ಉಪಚುನಾವಣೆಯಲ್ಲಿ ಶೇಕಡ 100ರಷ್ಟು ನಾನೇ ಅಭ್ಯರ್ಥಿಯಾಗಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಬೇರೆ ಚಿಹ್ನೆ ಬರಬಹುದು. ಕಾರ್ಯಕರ್ತರು ಬೆವರು, ರಕ್ತ ಹರಿಸಿ ಪಕ್ಷ ಕಟ್ಟಿ ಬೆಳೆಸಿದ್ದಾರೆ.  ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಇಂದು ಟಿಕೆಟ್ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯ ರೀತಿ ಈ ಬಾರಿ ನನ್ನ ಪರವಾಗಿ ಕೆಲಸ ಮಾಡಿ.  ಎಲೆಕ್ಷನ್ ನಲ್ಲಿ ಬಚ್ಚೇಗೌಡರು ನನ್ನ ಪರರ ನಿಲ್ಲಲು ಸಾಧ್ಯವಾಗುವುದಿಲ್ಲ. ಪಕ್ಷ ಬಿಟ್ಟು ಪ್ರಚಾರ ಮಾಡುವಾಗ ನನ್ನ ಪರ ನಿಲ್ಲಲು ಆಗಲ್ಲ. ನೀವೇ ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಟಿಕೆಟ್ ಸಿಗದಿದ್ದರೆ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

Key words: Hoskote-by-election- BJP – rebellion – Sharath Bachegauda -competition