ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹ: ಗೃಹ ಸಚಿವ ಅರಗ ಜ್ಞಾನೇಂದ್ರ ಕಾಲಿಗೆ ಬಿದ್ಧು ಮನವಿ ಮಾಡಿದ ಆಕಾಂಕ್ಷಿಗಳು.

ತುಮಕೂರು, ನವೆಂಬರ್,1,2022(www.justkannada.in): ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ಹುದ್ದೆಯ ಆಕಾಂಕ್ಷಿಗಳು ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಾಲಿಗೆ ಬಿದ್ಧು ಮನವಿ ಮಾಡಿದ  ಘಟನೆ ನಡೆದಿದೆ.

ತುಮಕೂರಿನಲ್ಲಿ ಪ್ರೌಢ ಶಾಲಾ ಮೈದಾನದಲ್ಲಿ ಗೃಹ ಸಚಿವರನ್ನ ಭೇಟಿಯಾಗಿ ಪೊಲೀಸ್ ಹುದ್ಧೆ ಆಕಾಂಕ್ಷಿಗಳು ಮನವಿ ಮಾಡಿದರು.  ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರರಿಗೆ ಮನವಿ ಸಲ್ಲಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಪೊಲೀಸ್ ಹುದ್ದ ಆಕಾಂಕ್ಷಿಗಳು ಆಗಮಿಸಿದ್ದರು.  2 ವರ್ಷಗಳಿಂದ ಶಾಸಕರು ಸಿಎಂಗೆ ಆಕಾಂಕ್ಷಿಗಳು ಮನವಿ ಮಾಡುತ್ತಿದ್ದರೂ ಸಹ ಸರ್ಕಾರ ಇದರ ಬಗ್ಗೆ ಯಾವುದೇ ತಲೆ ಕೆಡಿಸಿಕೊಂಡೇ ಇಲ್ಲ.  ಅಲ್ಲದೆ ಪಕ್ಕದ ರಾಜ್ಯಗಳಲ್ಲಿ ವಯೋಮಿತಿ ಹೆಚ್ಚಿದೆ. ಹೀಗಾಗಿ ರಾಜ್ಯದಲ್ಲೂ ಅದೇ ಮಾದರಿಯಲ್ಲಿ ವಯೋಮಿತಿ ಹೆಚ್ಚಳಕ್ಕೆ ಪೊಲೀಸ್ ಹುದ್ದೆ ಆಕಾಂಕ್ಷಿಗಳು ಎಷ್ಟೇ ಮನವಿ ಮಾಡಿದರೂ ಸಹ ಈವರೆಗೆ ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಿಸಲು ಸರ್ಕಾರ ಮುಂದಾಗಿಯೇ ಇಲ್ಲ.

ಈ ಹಿನ್ನೆಲೆಯಲ್ಲಿ ಇಂದು ಗೃಹಸಚಿವರನ್ನ ಭೇಟಿಯಾದ ಪೊಲೀಸ್ ಹುದ್ದೆ ಆಕಾಂಕ್ಷಿಗಳು,  ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಗೃಹಸಚಿವರ ಕಾಲಿಗೆ ಬಿದ್ದು ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ  ಮನವಿ ಮಾಡಿದರು.

Key words: home minister-Araga jnanendra-Increase – police- recruitment- age- aspirants.