ನಾಳೆ ಹೊಸ ಚಿತ್ರ ಅನೌನ್ಸ್ ಮಾಡಲಿದೆ ಹೊಂಬಾಳೆ ಫಿಲಂಸ್ ! ಪ್ರಶಾಂತ್-ಪ್ರಭಾಸ್ ಜೋಡಿಯ ಮೋಡಿ !?

kannada t-shirts

ಬೆಂಗಳೂರು, ಡಿಸೆಂಬರ್ 01, 2020 (www.justkannada.in): ಕೆಜಿಎಫ್ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲಂಸ್ ಡಿಸೆಂಬರ್ 2 ಕ್ಕೆ ಬಿಗ್ ಅನೌನ್ಸ್ ಮೆಂಟ್ ಮಾಡುವುದಾಗಿ ಘೋಷಿಸಿದೆ.

ಆ ಘೋಷಣೆ ಪ್ರಭಾಸ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಿನಿಮಾವಾಗಲಿದೆ ಎನ್ನಲಾಗುತ್ತಿದೆ. ಪ್ರಭಾಸ್-ಪ್ರಶಾಂತ್ ನೀಲ್ ಸಿನಿಮಾ ಮಾಡುವುದಾಗಿ ಕೆಲವು ತಿಂಗಳುಗಳ ಹಿಂದೆಯೇ ಮಾತುಕತೆಯಾಗಿತ್ತು.

ಅದೀಗ ಅಧಿಕೃತ ಘೋಷಣೆಯಾಗಿರಬಹುದು ಎಂಬ ನಿರೀಕ್ಷೆಯಿದೆ. ಡಿಸೆಂಬರ್ 2 ರಂದು ಅಂದರೆ ನಾಳೆ ಮಧ‍್ಯಾಹ್ನ 2.09 ಕ್ಕೆ ಆ ಹೊಸ ವಿಚಾರ ಹೊರಬರಲಿದೆ.

website developers in mysore