ಇತಿಹಾಸ ಬರೆದ ಭಾರತೀಯ ರೈಲ್ವೆ.

ಬೆಂಗಳೂರು, ಜೂನ್ 12, 2021 (www.justkannada.in): ಭಾರತೀಯ ರೈಲ್ವೆ ಇತಿಹಾಸದಲಿಯೇ ಮೊದಲ ಬಾರಿಗೆ ಎನ್ನಲಾಗಿರುವಂತಹ ಒಂದು ಸೇವೆಯಡಿ, ವಿದೇಶಗಳಿಂದ ೧,೦೧೨ ಟನ್‌ಗಳಷ್ಟು ತಾಜಾ ಹಣ್ಣುಗಳನ್ನು ಹೊತ್ತ ವಿಶೇಷ ರೈಲು ಬೆಂಗಳೂರಿಗೆ ಗುರುವಾರ ಬೆಳಿಗ್ಗೆ ಆಗಮಿಸಿತು. ಬ್ರೆಜಿಲ್, ಇರನ್ ಹಾಗೂ ಯೂರೋಪ್‌ನ ವಿವಿಧ ಪ್ರದೇಶಗಳಿಂದ ವಿಶೇಷ ತಳಿಯ ಸೇಬುಗಳು, ಕಿವಿ ಹಣ್ಣುಗಳು, ಏಪ್ರಿಕಾಟ್ ಹಾಗೂ ಚರ್ರಿ  ಹಣ್ಣುಗಳನ್ನು ಹೊತ್ತ ಶೀಥಲೀಕರಣ ವ್ಯವಸ್ಥೆಯುಳ್ಳ ಡಬ್ಬಗಳನ್ನು ಒಳಗೊಂಡಿರುವ ರೈಲು ಮುಂಬೈನಿಂದ ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿರುವ ಇನ್‌ಲ್ಯಾಂಡ್ ಕಂಟೇನರ್ ಡಿಪೊಗೆ ಆಗಮಿಸಿತು.jk

ಭಾರತೀಯ ರೈಲ್ವೆ ಅಡಿ ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಕಾನ್‌ ಕಾರ್) ಎಂಬ ಸಂಸ್ಥೆ ನಿರ್ವಹಿಸುತ್ತಿರುವ ಈ ರೀಫರ್ ಸ್ಪೆಷಲ್ ರೈಲು ಒಟ್ಟು 44 ಶೀತಲೀಕೃತ ಕಂಟೇನರ್‌ಗಳನ್ನು ಒಳಗೊಂಡಿದ್ದು, ಪ್ರತಿ ಕಂಟೇನರ್ ೨೩ ಟನ್‌ಗಳಷ್ಟು ತಾಜಾ ಹಣ್ಣುಗಳನ್ನು ಹೊತ್ತು ತಂದಿತು. ಈ ಹಣ್ಣುಗಳನ್ನು ಮುಂಬೈನ ಜವಾಹಾರ್‌ಲಾಲ್ ನೆಹರು ಪೋರ್ಟ್ ಟ್ರಸ್ಟ್ ನ ರೈಲ್ವೆ ಒಳಾಂಗಣ ಯಾರ್ಡ್ ನಿಂದ ಇಲ್ಲಿಗೆ ಸಾಗಿಸಲಾಗಿದೆ.

ಈ ನೂತನ ಸೇವೆಯ ಕುರಿತು ಮಾತನಾಡಿದ ಕಾನ್‌ಕಾರ್, ಬೆಂಗಳೂರಿನ ಸಮೂಹ ಪ್ರಧಾನ ವ್ಯವಸ್ಥಾಪಕರಾದ ಡಾ. ಅನೂಪ್ ದಯಾನಂದ್ ಸಾಧು ಅವರು, “ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲಿನಲ್ಲಿ ತಾಜಾ ಹಣ್ಣುಗಳನ್ನು ರವಾನೆ ಮಾಡಲಾಗಿದ್ದು, ಈ ಪ್ರಾಯೋಗಿಕ ಸೇವೆ ಯಶಸ್ವಿಯಾಗಿದೆ. ಭಾರತದಲ್ಲಿ, ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ವಿದೇಶಗಳ ತಾಜಾ ಹಣ್ಣುಗಳಿಗೆ ಭಾರಿ ಬೇಡಿಕೆಯಿದೆ. ಹಾಗಾಗಿ ಜನರ ಈ ಬೇಡಿಕೆಯನ್ನು ಪೂರೈಸಲು ನಾವು ನಿರ್ಧರಿಸಿದೆವು,” ಎಂದರು.

ಭಾರತದ ತಾಜಾ ಹಣ್ಣುಗಳ ಮುಂಚೂಣಿ ಆಮದುದಾರರಾದ ಐಜಿ ಫ್ರೆಶ್ ಇಂಟರ್‌ ನ್ಯಾಷನಲ್ ಪ್ರೈ. ಲಿ. ಸಂಸ್ಥೆಯು ಈ ಸರಕನ್ನು ಬುಕ್ ಮಾಡಿತ್ತು.

“ಈ ಮೊದಲು ತಾಜಾ ಹಣ್ಣುಗಳನ್ನು ರಸ್ತೆ ಸಾರಿಗೆಯ ಮೂಲಕ ಮಾತ್ರ ರವಾನಿಸಲಾಗುತಿತ್ತು. ಆದರೆ ಈ ನೂತನ ಸೇವೆ ಒಂದು ಹೊಸ ಅದ್ಭುತವಾದ ವ್ಯಾಪಾರ ಅವಕಾಶವನ್ನು ತೆರೆದಿದೆ. ಈ ಮೊದಲ ಸೇವೆ ಒಂದರಲ್ಲಿಯೇ ಕಾನ್‌ಕಾರ್ ರೂ.೨೫,೨೧,೦೦೦ ಆದಾಯವನ್ನು ಗಳಿಸಿದೆ! ಇದೇ ರೀತಿ ನಾವು ಪ್ರತಿ ವಾರ ಒಂದು ರೀಫರ್ ಸ್ಪೆಷಲ್ ಅನ್ನು ತರಲಿದ್ದೇವೆ,” ಎನ್ನುತ್ತಾರೆ ಅನೂಪ್ ದಯಾನಂದ್. ಈ ಹಣ್ಣುಗಳನ್ನು ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ ಹಂಚಿಲಾಗುತ್ತದೆ. ಈ ಎಲ್ಲಾ ಪ್ರದೇಶಗಳಿಗೆ ಬೆಂಗಳೂರು ಹಣ್ಣುಗಳನ್ನು ಹಂಚಲಿರುವ ಕೇಂದ್ರ ಸ್ಥಾನವಾಗಿದೆ.”

ಈ ಶೀಥಲೀಕರಣಗೊಳಿಸಿರುವ ಕಂಟೇನರ್‌ಗಳ ವಿಶೇಷತೆಯ ಬಗ್ಗೆ ಮಾತನಾಡಿದ ಸಾಧು ಅವರು, “ಈ ಪ್ರತಿಯೊಂದು ಕಂಟೇನರ್ ೪೦ ಅಡಿಗಳಷ್ಟು ಉದ್ದವಿದ್ದು, ಇದರೊಳಗಿನ ತಾಪಮಾನ ‘ಶೂನ್ಯ’ದಿಂದ ‘ಎರಡು’ ಡಿಗ್ರಿಗಳಷ್ಟು ಇರುತ್ತದೆ. ಇಡೀ ರೈಲಿಗೆ ಒಂದು ಸಾಮಾನ್ಯ ಶಕ್ತಿ ಡಬ್ಬಿಯಿದ್ದು , ಈ ರೈಲಿನ ಇಡೀ ಪ್ರಯಾಣದ ಸಂದರ್ಭದಲ್ಲಿ ಈ ಕಂಟೇನರ್‌ಗಳ ತಾಪಮಾನದ ನಿಗಾವಣೆ ಮಾಡಲು ಓರ್ವ ಸಿಬ್ಬಂದಿ ಇರುತ್ತಾರೆ,” ಎಂದು ವಿವರಿಸಿದರು. ಅಚ್ಚರಿ ಎನಿಸುತ್ತದೆ, ಅಲ್ಲವೇ?!!

ಸುದ್ದಿ ಮೂಲ: ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್

Key words: History –Indian- Railways- Fruits