ಹಿಂದೂ ಎಂಬುದು ಪರ್ಷಿಯನ್ ಪದ: ಹಿಂದೂ  ಪದದ ಅರ್ಥ ಬಹಳ ಅಶ್ಲೀಲವಾಗಿದೆ- ವಿವಾದಾತ್ಮಕ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ.

ಬೆಳಗಾವಿ,ನವೆಂಬರ್,7,2022(www.justkannda.in):  ಹಿಂದೂ ಎಂಬ ಪದ  ಪರ್ಷಿಯನ್ ನಿಂದ ಬಂದಿದೆ. ಹಿಂದೂ ಎಂಬ ಪದದ ಅರ್ಥ ಬಹಳ ಅಶ್ಲೀಲವಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ  ಸತೀಶ್ ಜಾರಕಿಹೊಳಿ,  ಹಿಂದೂ ಪದದ ಅರ್ಥ ಅಶ್ಲೀಲವಾಗಿದ್ದು, ನಿಜಾರ್ಥ ತಿಳಿದರೆ ನಾಚಿಕೆ ಆಗುತ್ತದೆ. ಭಾರತಕ್ಕೂ, ಪರ್ಷಿಯನ್ ​ಗೂ ಏನೂ ಸಂಬಂಧವಿಲ್ಲದಿದ್ದರೂ, ಹಿಂದೂ ಪದ ನಮ್ಮದು ಹೇಗಾಯಿತು ಎಂಬುವುದರ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಹೇಳಿದ್ದಾರೆ.

ಹಾಗೆಯೇ ನಿಪ್ಪಾಣಿಯಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಇಬ್ಬರು ದೇಶನ್ನ ಮಾರುತ್ತಿದ್ದಾರೆ. ಹೆಣಗಳ ರಾಜಕಾರಣ ಹಣದ ಮೇಲೆ ರಾಜಕಾರಣ ನಡೆಯುತ್ತಿದೆ ಎಂದು ಪರೋಕ್ಷವಾಗಿ ಮೋದಿ ಅಮಿತ್ ಶಾ ವಿರದ್ಧ ವಾಗ್ದಾಳಿ ನಡೆಸಿದರು.

Key words: Hindu -Persian -word – Satish Jarakiholi