ಹಿಮಾ ದಾಸ್ ಹೊಸ ದಾಖಲೆ: ಒಂದೇ ವಾರದಲ್ಲಿ ಎರಡನೇ ಚಿನ್ನ

ನವದೆಹಲಿ, ಜುಲೈ 08, 2019 (www.justkannada.in): ಭಾರತದ ಅಥ್ಲೀಟ್​ ಹಿಮಾ ದಾಸ್ ಲೆಂಡ್​ನಲ್ಲಿ ನಡೆಯುತ್ತಿರುವ ಕುಟ್ನೋ ಅಥ್ಲೆಟಿಕ್ಸ್ ಮೀಟ್​ ಕ್ರೀಡಾಕೂಟದ 200 ಮೀ. ಓಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಈ ಮೂಲಕ ಅವರು ಒಂದೇ ವಾರದಲ್ಲಿ ಎರಡು ಚಿನ್ನದ ಪದಕ ಗೆದ್ದಂತಾಗಿದೆ. ಭಾರೀ ಪೈಪೋಟಿಯಿಂದ ಕೂಡಿದ್ದ ಈ ರೇಸ್​ ಅನ್ನು ಹಿಮಾ 23.97 ಸೆಕೆಂಡ್​ಗಳಲ್ಲಿ ಪೂರೈಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಭಾರತದ ವಿಕೆ ವಿಸ್ಮಯಾ 24.06 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ಪಾತ್ರರಾಗಿದ್ದಾರೆ. ಇನ್ನು 200 ಮೀ. ರೇಸ್​ನಲ್ಲಿ ಮೊಹಮ್ಮದ್ ಅನಸ್ ಚಿನ್ನ ಗೆದ್ದಿದ್ದಾರೆ.