ಹಿಜಾಬ್ ತೀರ್ಪು ಬರುವವರೆಗೂ ಸಮವಸ್ತ್ರ ಕಡ್ಡಾಯ ನಿಯಮ ಪಾಲಿಸಲೇಬೇಕು-ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಬೆಂಗಳೂರು,ಅಕ್ಟೋಬರ್,13,2022(www.justkannada.in):  ಹಿಜಾಬ್ ಕುರಿತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು ಪ್ರಕಟವಾದ ಹಿನ್ನೆಲೆ ಪ್ರಕರಣವನ್ನ ಸಿಜೆಐ ಪೀಠಕ್ಕೆ ವರ್ಗಾವಣೆ ಮಾಡಲಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಹಿಜಾಬ್ ತೀರ್ಪು ಬರುವವರೆಗೂ ಸಮವಸ್ತ್ರ ಕಡ್ಡಾಯ ನಿಯಮ ಪಾಲಿಸಲೇಬೇಕು ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸುತ್ತೇವೆ. ಕೋರ್ಟ್ ನಿಂದ ಸರಿಯಾದ ತೀರ್ಪು ನಿರೀಕ್ಷಿಸಿದ್ದೆ. ಆದರೆ  ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ತೀರ್ಪು ಬರುವವರೆಗೂ ಹೈಕೋರ್ಟ್ ಆದೇಶ ಜಾರಿಯಲ್ಲಿರುತ್ತದೆ. ಸಮವಸ್ತ್ರ ಕಡ್ಡಾಯ ನಿಯಮ ಪಾಲಿಸಬೇಕು. ತರಗತಿಗಳಲ್ಲಿ ಹಿಜಾಬ್ ನಿರ್ಬಂಧ ಮುಂದುವರೆಯಲಿದೆ ಎಂದರು.

ನ್ಯಾ. ಹೇಮಂತ್ ಗುಪ್ತಾ ಅವರು ಮುಸ್ಲೀಂ ವಿದ್ಯಾರ್ಥಿನೀಯರ  ಮೇಲ್ಮನವಿ ಅರ್ಜಿ ವಜಾಗೊಳಿಸಿದರೇ  ನ್ಯಾಯಮೂರ್ತಿ ಸುಧಾಂಶು ಅವರು  ಹೈಕೋರ್ಟ್ ಆದೇಶವನ್ನ ರದ್ಧುಗೊಳಿಸಿ ವಿಭಿನ್ನ ತೀರ್ಪು ಪ್ರಕಟಿಸಿದ್ದರು.

Key words: hijab –supreme court -judgment- Education Minister -BC Nagesh.