ಹೆಣ್ಣು ಮಕ್ಕಳ ಮುಖ ತೆಗಿಸಿ ನೋಡೋ ಆಸೆ ಯಾಕೆ..?  ಹಿಜಾಬ್ ವಿವಾದ ಕುರಿತು ಸಿಎಂ ಇಬ್ರಾಹಿಂ ಆಕ್ರೋಶ.

ಬೆಂಗಳೂರು,ಫೆಬ್ರವರಿ,5,2022(www.justkannada.in):  ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್ ವಿವಾದಕ್ಕೆ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲೇಜಿಗೆ ಹೋಗೋದು ಓದೋಕೊ..? ಬ್ಯೂಟಿ ನೋಡೋಕೋ..?  ಹೆಣ್ಣು ಮಕ್ಕಳ ಮುಖ ತೆಗಿಸಿ ನೋಡೋ ಆಸೆ ಯಾಕೆ..?  ಎಂದು ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಇಬ್ರಾಹಿಂ , ಬಿಜೆಪಿಯವರಿಗೆ ಯಾವುದೇ ವಿವಾದದಲ್ಲೂ ಯಶಸ್ಸು ಸಿಗುತ್ತಿಲ್ಲ.  ಹೀಗಾಗಿ ಹಿಜಾಬ್ ವಿವಾದ ಶುರು ಮಾಡಿದ್ದಾರೆ. ಹಿಜಾಬ್ ಬಹಳ ವರ್ಷದಿಂದ ನಡೆದುಕೊಂಡು ಬಂದಿದೆ. ಮೈಸೂರು ಮಹಾರಾಜರ ಕಾಲದಿಂದಲೂ ಹಿಜಾಬ್  ಇದೆ. ಸಿಎಂ ಬೊಮ್ಮಾಯಿ ಕೂಡ ಹಿಜಾಬ್ ಧರಿಸಿದ್ದಾರೆ. ವಿವಾದ ಸೃಷ್ಠಿಸುವಲ್ಲಿ ಸರ್ಕಾರ ಮುಂಚೂಣಿಯಲ್ಲಿದೆ. ಎಲ್ಲಿಗೆ ಈ ರಾಜ್ಯ ತೆಗೆದುಕೊಂಡು ಹೋಗ್ತೀರಿ. ಎಷ್ಟು ದಿನ ಇರ್ತೀರಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

JDS- join- issue-CM Ibrahim- clarified.
ಕೃಪೆ-internet

ಉತ್ತರ ಕರ್ನಾಟಕದಲ್ಲಿ ಮಹಿಳೆಯರು ಸೀರೆಯನ್ನ ತಲೆಯ ಮೇಲೆ ಹಾಕಿಕೊಳ್ತಾರೆ. ಬಿಜೆಪಿಗೆ ಇದೇ ಕೊನೆ ಅವಕಾಶ. ಗಾಳಿ ಬದಲಾಗುತ್ತಿದೆ. ಕೋರ್ಟ್ ಆದೇಶದವರೆಗೂ ಯಥಾಸ್ಥಿತಿ ಕಾಪಾಡಿ  ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

Key words: hijab-MLC-CM ibrahim