ಹಿಜಾಬ್ ಗೆ ಅವಕಾಶ ಕೋರಿದ್ಧ  ಎಲ್ಲಾ ರಿಟ್ ಅರ್ಜಿಗಳು ವಜಾ: ಸರ್ಕಾರದ ಸಮವಸ್ತ್ರ ಆದೇಶ ಎತ್ತಿ ಹಿಡಿದ ಹೈಕೋರ್ಟ್.

ಬೆಂಗಳೂರು,ಮಾರ್ಚ್,15,2022(www.justkannada.in): ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರದ ಜತೆ ಹಿಜಾಬ್ ಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಎಲ್ಲಾ ರಿಟ್ ಅರ್ಜಿಗಳನ್ನ ವಜಾಗೊಳಿಸಿದ ಹೈಕೋರ್ಟ್, ಸರ್ಕಾರದ ಸಮವಸ್ತ್ರ ಆದೇಶ ಎತ್ತಿ ಹಿಡಿಯುವ ಮೂಲಕ  ಐತಿಹಾಸಿಕ ತೀರ್ಪು ನೀಡಿದೆ.

ಹಿಜಾಬ್ ಕೋರಿ ಸಲ್ಲಿಸಿದ್ಧ ಅರ್ಜಿ ವಿಚಾರಣೆ ನಡೆಸಿದ್ಧ ಹೈಕೋರ್ಟ್ ನ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ ರವರ ಪೂರ್ಣ ಪೀಠ  ಇಂದು ತೀರ್ಪು ಪ್ರಕಟಿಸಿದೆ.

ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ. ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಸರ್ಕಾರದ ವಸ್ತ್ರಸಂಹಿತೆಯನ್ನ ಪ್ರಶ್ನೆ ಮಾಡುವಂತಿಲ್ಲ. ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಾಲೆಗಳಿಗಿದೆ.  ವಿದ್ಯಾರ್ಥಿನೀಯರು ಸಮವಸ್ತ್ರ ಸಂಹಿತೆ ಆದೇಶ ಪಾಲಿಸಬೇಕು.  ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ಇಲ್ಲ ಎಂದು ತೀರ್ಪು ಪ್ರಕಟಿಸಿ ಹೈಕೋರ್ಟ್ ವಿಚಾರಣೆ ಮುಕ್ತಾಯ ಮಾಡಿದೆ.

Key words: hijab -High Court -verdict

ENGLISH SUMMARY….

All writ appeals requesting permission to wear Hijab’s cancelled: High Court uplifts Govt.s Uniform order
Bengaluru, March 15, 2022 (www.justkannada.in): The Hon’ble High Court of Karnataka has quashed all the writ appeals submitted requesting permission to wear hijab along with uniforms in schools and colleges. Thereby the High Court has uplifted the government’s order.
The High Court bench comprising Justices Rituraj Avasti, Justice Krishna Deekshit, and Justice Khaji Jaibunnisa Mohiyudin has given the judgment.
The judgment read, “Hijab is not mandatory in Islam. The government’s order is legal, nobody can question the government’s uniform code. Girl students should follow the uniform rule. Wearing of hijab will not be allowed in schools and colleges.
The three-member high court bench heard the hijab writ applications for 11 days, from February 11, and gave the judgment today.
Keywords: High Court/ Govt’s orders uplift/ Hijab