‘ನೋ ರೈಟ್, ನೋ ಲೆಫ್ಟ್’ : ನಮ್ಮ ಸರ್ಕಾರದ್ದು ಅಭಿವೃದ್ಧಿಯತ್ತ ಮಾತ್ರ ಗಮನ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಮಾರ್ಚ್,30,2022(www.justkannada.in): ಟಿಪ್ಪು ಪಠ್ಯ ಕೈಬಿಡುವ ವಿಚಾರ ಹಲಾಲ್ ಮಾಂಸ ನಿರ್ಬಂಧಕ್ಕೆ ಅಭಿಯಾನ ಆರಂಭವಾಗಿರುವ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಅಭಿಯಾನದ ಬಗ್ಗೆ ಸರ್ಕಾರ ಗಮನ ಹರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು  ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ  ಬಸವರಾಜ ಬೊಮ್ಮಾಯಿ, ನೋ ರೈಟ್, ನೋ ಲೆಫ್ಟ್, ಬಲಪಂಥೀಯ ಎಡಪಂಥಿಯ ಅಂತಾ ಯಾವುದು ಇಲ್ಲ. ಅಭಿವೃದ್ದಿಯತ್ತ ಮಾತ್ರ ನಮ್ಮ ಗಮನವಾಗಿದೆ. ನಾವು ಶಾಂತಿ ಜನರ ಭದ್ರತೆ ಅಭಿವೃದ್ಧಿಯ ಸಿದ್ಧಾಂತ ಮಾತ್ರ ನಂಬುತ್ತೇವೆ .    ಇಂಥ ಸನ್ನೀವೇಶ ಈಗಷ್ಟೆ ಆರಂಭವಾಗಿದೆ ನಮ್ಮ ನಿಲುವು ಏನೆಂಬುದು ಮುಂದೆ ಹೇಳುತ್ತೇವೆ ಎಂದರು.

ಕೆಲವು ನಿಯಮಗಳು ಆಚರಣೆಗಳು ಹಿಂದಿನಿಂದಲೂ ಇವೆ  ಧಾರ್ಮಿಕ ದತ್ತಿ ನಿಯಮದ ಬಗ್ಗೆ ಕೆಲ ಆಕ್ಷೇಪಗಳಿವೆ. ಧಾರ್ಮಿಕ ದತ್ತಿ ಕಾಯ್ದೆ ಬಗ್ಗೆ ಅವಲೋಕನ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: hijab-halal-CM-Basavaraj bommai-clearity