ಹಿಜಾಬ್ ವಿವಾದ: ಮೇಲ್ಮನವಿ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ.

ನವದೆಹಲಿ,ಫೆಬ್ರವರಿ,11,2022(www.justkannada.in):  ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ಕರ್ನಾಟಕ ಹೈಕೋರ್ಟ್ ನೀಡಿದ್ಧ ಮೌಖಿಕ ಆದೇಶವನ್ನ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಮುಂದಿನ ಆದೇಶದವರೆಗೂ ಯಾವುದೇ ಧಾರ್ಮಿಕ ಗುರುತುಗಳನ್ನ ಬಳಸಬಾರದು. ಹಿಜಾಬ್ ಕೇಸರಿ ಶಾಲು ಧರಿಸುವಂತಿಲ್ಲ ಎಂದು ನಿನ್ನೆ ಹೈಕೋರ್ಟ್ ಮಧ್ಯಂತರ ಮೌಖಿಕ ಆದೇಶ ನೀಡಿತ್ತು. ಇದನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಕಾಮತ್, ಸೋಮವಾರದಿಂದ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.  ವಿದ್ಯಾರ್ಥಿಗಳು ಧಾರ್ಮಿಕ ಡ್ರೆಸ್ ಧರಿಸದಂತೆ ಹೈಕೋರ್ಟ್ ಮೌಖಿಕ ಆದೇಶ ನೀಡಿದೆ.    ಧಾರ್ಮಿಕ ನಂಬಿಕೆಗೆ ಸಂಬಂಧಿಸಿದಂತೆ ದೂರಗಾಮಿ ಪರಿಣಾಮ.  ಸಂವಿಧಾನದ  ನೀಡಿರುವ ಸಾಂವಿಧಾನಿಕ ಹಕ್ಕುಗಳನ್ನ ಸಂರಕ್ಷಿಸಬೇಕಿದೆ. ಹೀಗಾಗಿ ತುರ್ತು ವಿಚಾರಣೆ ನಡೆಸುವಂತೆ ಕಾಮತ್ ಮನವಿ ಮಾಡಿದರು.

ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ ಕೋರ್ಟ್  ಸಿಜೆಐ, ಯಾವುದಾದರೂ ಪರೀಕ್ಷೆಗೆ ತೊಂದರೆಯಾಗುವುದಾದರೇ ಸೂಕ್ತ ಸಂದರ್ಭದಲ್ಲಿ ವಿಚಾರಣೆ ನಡೆಸುತ್ತೇವೆ. ವಿವಾದವನ್ನ ರಾಷ್ಟ್ರೀಯ ವಿವಾದವಾಗಿಸಬೇಡಿ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಡಿ. ಹೈಕೋರ್ಟ್ ಆದೇಶ ಗೊತ್ತಿಲ್ಲ. ಪರೀಕ್ಷೆಗೆ ತೊಂದರೆಯಾದರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ.  ನಮಗೆ ಎಲ್ಲರ ಹಕ್ಕು ಸಂರಕ್ಷಿಸಬೇಕಿದೆ. ಸೂಕ್ತ ಸಮಯದಲ್ಲಿ ಮಧ್ಯ ಪ್ರವೇಶಿಸುತ್ತೇವೆ ಎಂದು ಹೇಳಿದರು.

Key words: Hijab-Controversy-Supreme Court- Appeal

ENGLISH SUMMARY…

Hijab row: SC refuses for emergency trial
New Delhi, February 11, 2022 (www.justkannada.in): The Supreme Court of India has refused to consider the appeal submitted questioning the Karnataka High Court’s oral orders over the Hijab row as an emergency trial.
An appeal was submitted in the Hon’ble Supreme Court questioning the Karnataka High Court’s orders restricting the wearing of religious clothing till further orders. The HC had stated that the students should not wear Hijab or Saffron stoles.
Advocate Kamat representing the applicant requested to start the trial from Monday. However, the Supreme Court CJI refused, and mentioned that it will be considered as an emergency, and trial will be conducted immediately in case if it is troubling to conduct the exams. “Don’t make it a national-level controversy. We will arrive at a proper decision in case anything is troubling to conduct the exams. We want to protect the rights of everyone. We will intervene at the right time,” he said.
Keywords: Supreme Court/ Karnataka High Court/ orders/ question/ appeal/ refuse