ಹೈಕೋರ್ಟ್ ಯಥಾಸ್ಥಿತಿ ಆದೇಶ ಪಾಲಿಸಿ: ಕೆಎಸ್ಒಯುಗೆ ಸರ್ಕಾರದ ವಾರ್ನಿಂಗ್

ಮೈಸೂರು,ಸೆಪ್ಟಂಬರ್,30,2021(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ತಾತ್ಕಾಲಿಕ ಬೋಧಕ ಸಿಬ್ಬಂದಿಗಳನ್ನು ಖಾಯಂಗೊಳಿಸಿ ಯುಜಿಸಿ ವೇತನ ನೀಡುವ ಕುರಿತಂತೆ ಹೈ ಕೋರ್ಟ್ ಯಥಾಸ್ಥಿತಿ ಆದೇಶ ಪಾಲಿಸಿ ಎಂದು ಕೆಎಸ್ ಒಯುಗೆ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಕುಮಾರ್ ನಾಯ್ಕ್ , ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ತಾತ್ಕಾಲಿಕ ಬೋಧಕ ಸಿಬ್ಬಂದಿಗಳನ್ನು ಖಾಯಂಗೊಳಿಸಿ ಯುಜಿಸಿ ವೇತನ ನೀಡುವ ಕುರಿತಂತೆ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ:36509–36527/2019, 49437/2019 ಮತ್ತು 51877/2019 ಇವುಗಳಲ್ಲಿ ಜಾರಿಯಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸದಿರಲು ಇರುವ ಕಾರಣಗಳ ಬಗ್ಗೆ ವಿವರಣೆಯನ್ನು ನೀಡುವಂತೆ ಸರ್ಕಾರದ ಇದೇ ಸಮಸಂಖ್ಯೆಯ ಪತ್ರ ದಿನಾಂಕ: 22.04 2021 ಮತ್ತು 03.07.2021ರ ಪತ್ರದಲ್ಲಿ ಕೋರಲಾಗಿತ್ತು ಆದರೆ, ಸದರಿ ಪತ್ರಕ್ಕೆ ಸಂಬಂಧಿಸಿದಂತೆ, ತಮ್ಮಿಂದ ಯಾವುದೇ ವರದಿ ಉತ್ತರ ಸ್ವೀಕೃತವಾಗಿರುವುದಿಲ್ಲ.

ಉಚ್ಚನ್ಯಾಯಾಲಯದ ರೀಟ್ ಅರ್ಜಿ ಸಂಖ್ಯೆ 36509-36527/2019. 49437/2019 ಮತ್ತು 51877/2019 ಗಳಲ್ಲಿ ಉಚ್ಛ ನ್ಯಾಯಾಲಯವು ಯಥಾಸ್ಥಿತಿ  ಕಾಪಾಡಲು ಈಗಾಗಲೇ ನಿರ್ದೇಶನ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಅರ್ಜಿದಾರರ ಪರವಾಗಿ ವಿಶ್ವವಿದ್ಯಾನಿಲಯವು ಯುಜಿಸಿಯ ವೇತನ ಸೌಲಭ್ಯಗಳನ್ನು ನೀಡುವ ನಿರ್ಧಾರ ತೆಗೆದುಕೊಂಡಲ್ಲಿ, ಸದರಿ ಪ್ರಕರಣಗಳಲ್ಲಿ, ನ್ಯಾಯಾಲಯ ತಿರಸ್ಕಾರ” (Contempt of Court) ಆಗುವ ಸಾಧ್ಯತೆಯಿರುತ್ತದೆ. ಆದುದರಿಂದ, ರಿಟ್ ಅರ್ಜಿ ಸಂಖ್ಯೆ: 36509-36527/2019, 49437/2019 ಮತ್ತು 51877/2019ರ ನ್ಯಾಯಾಲಯಗಳ ಪ್ರಕರಣಗಳಲ್ಲಿ ಪ್ರಸ್ತುತ ಉಚ್ಚನ್ಯಾಯಾಲಯವು ನೀಡಿರುವ ನಿರ್ದೇಶನದಂತೆ ಯಥಾಸ್ಥಿತಿ ಕಾಪಾಡಲು ಮತ್ತೊಮ್ಮೆ ಸೂಚಿಸಲಾಗಿದೆ.

ಮುಂದುವರೆದು, ಸರ್ಕಾರದ ಪತ್ರ ಸಂಖ್ಯೆ ಇಡಿ 59 ಯುಓವಿ 2017, ದಿನಾಂಕ:08.11.2017 ರಲ್ಲಿ ಈ 22 ಖಾಯಂಗೊಳಿಸಿರುವ ಸಿಬ್ಬಂದಿಗಳು ಯುಜಿಸಿ ವೇತನವನ್ನು ಪಡೆಯಲು ಅರ್ಹರಿರುವುದಿಲ್ಲ. ಅದರೂ  ಇವರುಗಳಿಗೆ ಯುಜಿಸಿ  ವೇತನವನ್ನು ವಿಸ್ತರಿಸಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಅಂದಾಜು ಒಮ್ಮೆ 4.69 ಕೋಟಿ ನಷ್ಟ ಉಂಟಾಗಿರುತ್ತದೆ. ಎಂದು ಹಿರಿಯ ಲೆಕ್ಕಾಧಿಕಾರಿಗಳು, ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಇವರು ತಮ್ಮ ಅಡಿಟ್  ತಪಾಸಣಾ ವರದಿಯಲ್ಲಿ ಆಕ್ಷೇಪಿಸಿರುವುದರಿಂದ, ನ್ಯಾಯಾಲಯದ ಅಂತಿಮ ತೀರ್ಮಾನವಾಗುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದ್ದಾರೆ.

Key words: High Court -Status –Order- Government- Warn -KSOU.