ಪ್ರಧಾನಿ ಮೋದಿ ರೋಡ್ ಶೋಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್..

ಬೆಂಗಳೂರು,ಮೇ,5,2023(www.justkannada.in): ಮೇ 6(ನಾಳೆ) ಮತ್ತು ಮೇ 7 ರಂದು ಬೆಂಗಳೂರಿನಲ್ಲಿ  ಪ್ರಧಾನಿ ಮೋದಿ ರೋಡ್ ಶೋಗೆ ಹೈಕೋರ್ಟ್‌ ಅನುಮತಿ ನೀಡಿ ಆದೇಶಿಸಿದೆ.

ರೋಡ್‌ ಶೋನಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ರೋಡ್‌ ಶೋಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿ ಹೈಕೋರ್ಟ್‌ ಗೆ ಪಿಐಎಲ್  ಸಲ್ಲಿಕೆಯಾಗಿತ್ತು.

ಈ ಪಿಐಎಲ್ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ದೀಕ್ಷಿತ್, ನ್ಯಾ. ವಿಜಯ್‌ಕುಮಾರ್ ಪಾಟೀಲ್​ ಅವರಿದ್ದ ಪೀಠ ಇದೀಗ ರೋಡ್ ಶೋಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಮೇ 6ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಮತ್ತು ಮೇ 7ರಂದು ಬೆಳಗ್ಗೆ 9 ಗಂಟೆಯಿಂದ ಬೆಳಗ್ಗೆ 11.30ರವರೆಗೆ ರೋಡ್ ಶೋಗೆ ಮಾತ್ರ ಅನುಮತಿ ನೀಡಲಾಗಿದೆ.

ರೋಡ್ ಶೋ ದಿನದಂದು ಪರೀಕ್ಷೆಗಳಿವೆಯೇ ಎಂದು ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದ್ದು, ರಾಜ್ಯದ 499 ಸೆಂಟರ್​​​ ಗಳಲ್ಲಿ ನೀಟ್ ಪರೀಕ್ಷೆ ನಡೆಯುತ್ತಿದೆ. ಬೆಂಗಳೂರಿನ 30 ಸೆಂಟರ್​​ಗಳಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಹೇಳಿದ್ದಾರೆ.

ಮೇ 7ರ ಮಧ್ಯಾಹ್ನ 2ರಿಂದ ಸಂಜೆ 5.20ರವರೆಗೆ ಪರೀಕ್ಷೆ ನಡೆಯುತ್ತದೆ. ಮೇ 6ರಂದು ಯಾವುದೇ ಪರೀಕ್ಷೆ ನಿಗದಿ ಬಗ್ಗೆ ಮಾಹಿತಿಯಿಲ್ಲ ಎಂಬ ತುಷಾರ್ ಗಿರಿನಾಥ್ ಹೇಳಿಕೆಯನ್ನು ಹೈಕೋರ್ಟ್ ರೆಕಾರ್ಡ್ ಮಾಡಿಕೊಂಡಿದೆ. ನಾಳಿನ ಪರೀಕ್ಷೆಗಳ ಬಗ್ಗೆ ತಕ್ಷಣ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ. ಮೇ 6, 7ರಂದು ಕಾಂಗ್ರೆಸ್ ರೋಡ್ ಶೋಗೂ ಅನುಮತಿ ನೀಡಲಾಗಿದೆ.

Key words: High Court – green signal – Prime Minister –Modi- road show.