ಇದೆಂಥಾ ಲಸಿಕೆ ಅಭಿಯಾನ..? ನಿಮಗೆ ವ್ಯಾಕ್ಸಿನ್ ನೀಡಲು ಆಗದಿದ್ರೆ ಹೇಳಿ- ಸರ್ಕಾರಕ್ಕೆ ಹೈಕೋರ್ಟ್ ಫುಲ್ ಕ್ಲಾಸ್…

ಬೆಂಗಳೂರು,ಮೇ,13,2021(www.justkannada.in):  ರಾಜ್ಯದ ಜನರಿಗೆ ಲಸಿಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದೆ.jk

ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಯಾಗಿರುವ  ಹಿನ್ನೆಲೆ, ಲಸಿಕೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡ ಹೈಕೋರ್ಟ್, 31 ಲಕ್ಷ ಜನರಿಗೆ ಯಾವಾಗ ವ್ಯಾಕ್ಸಿನ್ ಒದಗಿಸುತ್ತೀರಾ ಹೇಳಿ. ರಾಜ್ಯದಲ್ಲಿ 6 ಕೋಟಿಗೂ ಹೆಚ್ಚು ಜನರಿದ್ದಾರೆ. ನೀವು ಒಂದು ಪರ್ಸೆಂಟ್  ಜನರಿಗೆ ಲಸಿಕೆ ಒದಗಿಸಿಲ್ಲ. ಇದೆಂತಹ ಲಸಿಕೆ ಅಭಿಯಾನ..? ವ್ಯಾಕ್ಸಿನ್ ಕೊಡುವ ರೀತಿ ಹೀಗೆನಾ.  ನಿಮ್ಮಿಂದ ಲಸಿಕೆ ನೀಡಲು ಆಗದಿದ್ದರೇ ತಿಳಿಸಿ.ನಾವು ನಿಮ್ಮಿಂದ ಸಾಧ್ಯವಿಲ್ಲ  ಎಂದೇ ಆದೇಶ ದಾಖಲಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತು.

1ನೇ ಡೋಸ್ ಲಸಿಕೆ ತೆಗೆದುಕೊಂಡವರಿಗೆ 2ನೇ ಡೋಸ್ ಲಸಿಕೆ ಸಿಗುತ್ತಿಲ್ಲ. 2ನೇ ಡೋಸ್ ಲಸಿಕೆ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ..? ರಾಜ್ಯದಲ್ಲಿ 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆ ಇದೆ. ಈ ಗ್ಯಾಪ್ ಅನ್ನ ಹೇಗೆ ಸರಿಪಡಿಸುತ್ತೀರಿ..? ಎಂದು ಪ್ರಶ್ನಿಸಿದರು.

ಹಾಗೆಯೇ ಇದೇ ವೇಳೆ ಲಸಿಕೆ ಮಾರ್ಗಸೂಚಿ ಬಗ್ಗೆ ಹೈಕೋರ್ಟ್ ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರದ ಪರ ವಕೀಲರು, ಕೇಂದ್ರ ಸರಕಾರ ನೀಡಿದ ಮಾರ್ಗಸೂಚಿಯನ್ನ ರಾಜ್ಯ ಸರ್ಕಾರ ಪಾಲಿಸಿಲ್ಲ. ನೀಡಲಾಗುವ ಲಸಿಕೆಯಲ್ಲಿ ಶೇ.70 ರಷ್ಟು ಲಸಿಕೆಯನ್ನ 2ನೇ ಡೋಸ್ ಗೆ ಬಳಸಿ ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿತ್ತು. ಆದರೆ ರಾಜ್ಯ ಸರ್ಕಾರ ನಿಯಮ ಪಾಲನೆ ಮಾಡಿಲ್ಲ ಎಂದು ಹೈಕೋರ್ಟ್ ಗೆ ತಿಳಿಸಿದರು.high-court-class-state-govt-covid-vaccine

ಹಾಗೆಯೇ ಇದೇ ವೇಳೆ ಹೈಕೋರ್ಟ್ ಗೆ ಕೇಂದ್ರ ಸರ್ಕಾರದ ಎಎಸ್ಜಿ ಐಶ್ವರ್ಯಾ ಭಾಟಿ ಉತ್ತರ ನೀಡಿದ್ದು, ವ್ಯಾಕ್ಸಿನ್ 2ನೇ ಡೋಸ್ ಗೆ 6 ವಾರಗಳ ಕಾಲಾವಕಾಶವಿದೆ. ವ್ಯಾಕ್ಸಿನ್ ವಿಳಂಬವಾದರೆ 1ನೇ ಡೋಸ್ ವ್ಯರ್ಥವಾಗಲ್ಲ. ಕೋವಿಶೀಲ್ಡ್ ಗೆ 8 ವಾರ ಕಾಲಾವಕಾಶವಿದೆ ಎಂದು ವಿವರಿಸಿದ್ದಾರೆ.

Key words: High Court- Class –state Govt- covid Vaccine